ಆಕಾಶವಾಣಿ ನೇರ ಫೋನ್ ಇನ್ ಸಂವಾದದಲ್ಲಿಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಭಾಗಿ

ಕಲಬುರಗಿ:ಎ.18: ಆಕಾಶವಾಣಿ ಕೇಂದ್ರದ “ಜೊತೆ ಜೊತೆಯಲಿ ” ನೇರ ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ಚುನಾವಣಾ ಸಿದ್ದತೆ ಮತ್ತು ಮತದಾರರ ಜಾಗೃತಿ ವಿಷಯದ ಕುರಿತಾಗಿ ಏಪ್ರಿಲ್ 19ರಂದು ಬೆಳಿಗ್ಗೆ 10.30 ರಿಂದ 11:30 ರವರೆಗೆ ನೇರ ಫೋನ್ ಇನ್ ಸಂವಾದ ನಡೆಯಲಿದೆ .ಈ ಕಾರ್ಯಕ್ರಮದಲ್ಲಿ ಕಲಬುರ್ಗಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಯಶವಂತ ವಿ. ಗುರುಕರ್ ಭಾಗವಹಿಸಲಿದ್ದಾರೆ.
ಕಲ್ಬುರ್ಗಿ ಜಿಲ್ಲೆಯಲ್ಲಿ ಮುಕ್ತ, ಸ್ವತಂತ್ರ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಕೈಗೊಂಡ ಕ್ರಮಗಳ ಕುರಿತು ಮತ್ತು ಮತದಾರರ ಜಾಗೃತಿಯ ಬಗ್ಗೆ ಕೇಳುಗರು ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸಬಹುದು. ಆಸಕ್ತ ಕೇಳುಗರು 295986 ಅಥವಾ 295987 (ಎಸ್‌ಟಿಡಿ ಸಂಖ್ಯೆ 08472) ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ಅವರು ನಡೆಸಿಕೊಡಲಿದ್ದಾರೆ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ