ಕಲ್ಬುರ್ಗಿ: ಇಡೀ ರಾಜ್ಯದಲ್ಲಿ ಕಲಬುರ್ಗಿ ದಕ್ಷಿಣ ಮತ ಕ್ಷೇತ್ರವನ್ನು ಅಭಿವೃದ್ಧಿಯ ಮುಂಚೂಣಿಯಲ್ಲಿ ನಿಲ್ಲಿಸಿ ಮಾದರಿ ಕ್ಷೇತ್ರವನ್ನಾಗಿಸಲು ಸರ್ವ ಪ್ರಯತ್ನಮಾಡುವುದಾಗಿ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.
ಕಲ್ಬುರ್ಗಿ ಆಕಾಶವಾಣಿಯ” ಜೊತೆ ಜೊತೆಯಲಿ ” ನೇರ ಫೆÇೀನ್ ಇನ್ ಸಂವಾದದಲ್ಲಿ ಮೇ 31 ರಂದು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು ಕುಡಿಯುವ ನೀರು , ವಸತಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಕಲ್ಬುರ್ಗಿಯನ್ನು ಸವಾರ್ಂಗೀಣ ಪ್ರಗತಿ ಸಾಧಿಸಿದ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ದರು. ಕೇಂದ್ರದ ಧನಸಹಾಯ ಹಾಗೂ 371 ನೆಯ ಕಲಂ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆದು ಅಭಿವೃದ್ಧಿಪಡಿಸಲಾಗುವುದು. ನಗರೋತ್ಥಾನ ಯೋಜನೆ ಹಾಗೂ ಅಮೃತ ಯೋಜನೆಯಡಿ ಕಲ್ಬುರ್ಗಿ ನಗರದಲ್ಲಿ ರಾಮ ಮಂದಿರ, ಜೇವರ್ಗಿ ಕಾಲೋನಿ, ಗಂಜ್ ಪ್ರದೇಶ , ಅಳಂದ ನಾಕ ,ಅಪ್ಪ ಅಪ್ಪನ ಗುಡಿ ಹಾಗೂ ಖರ್ಗೆ ಪೆಟ್ರೋಲ್ ಪಂಪ್ ಬಳಿ ವೈಜ್ಞಾನಿಕ ತಳಹದಿಯಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು .ನಗರದಲ್ಲಿ ವಿದ್ಯುತ್ ದೀಪ ಅಳವಡಿಸಲು 50 ಲಕ್ಷ ರೂಪಾಯಿ ವಿನಿಯೋಗಿಸಲು ಯೋಜನೆ ಸಿದ್ಧಪಡಿಸಲಾಗಿದೆ. 16 ಕಡೆಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಪಡಿಸಿ ಹಸಿರು ಕಲ್ಬುರ್ಗಿಯ ಕನಸು ನನಸು ಮಾಡಲು ಉದ್ದೇಶಿಸಲಾಗಿದೆ.
ಒಳಚರಂಡಿಯ ಯೋಜನೆ ಅನುಷ್ಠಾನಕ್ಕೆ ಹೊಸ ಪ್ಲಾನ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ . ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಈ ಭಾಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಕಂಪನಿಗಳಿಗೆ ಆಹ್ವಾನ ನೀಡಲಾಗುವುದು.ಕಲಬುರ್ಗಿ ನಗರ ಸುತ್ತ ನಾಲ್ಕು ದೊಡ್ಡ ಕೆರೆಗಳನ್ನು ಮಾಡಿ ನೀರಿನ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂವಾದದಲ್ಲಿ ಕಲಬುರ್ಗಿಯ ಗೀತಾ , ಪಂಚಶೀಲ ನಗರದ ಸಾಯಿರಾ ಬಾನು, ತಿಲಕ ನಗರದ ಭೀಮಸೇನ್ ರಾವ್ ಕುಲಕರ್ಣಿ , ವಾಸುದೇವ ಪಾಟೀಲ್ ವೈಜಾಪುರ, ಸುರಪುರದ ರಾಘವೇಂದ್ರ ಭಕ್ರಿ,ಶ್ಯಾಮಲಾ ಶಿವಕುಮಾರ್ ಬಸವೇಶ್ವರ ನಗರ, ಅಂಬರಾಯ ಕೋಣೆ ಶಹಾಬಜಾರ, ವಸಂತ ರಾವ್ ಮುದ್ದಡಗ, ನರೇಶ್ ರೆಡ್ಡಿ ಸೇಡಂ ,ಯಶವಂತರಾವ್ ಪಾಟೀಲ್ ಪಾಲ್ಗೊಂಡರು.
ಈ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು ನೂತನ ಶಾಸಕರಿಗೆ ನಿಲಯದ ಮುಖ್ಯಸ್ಥರಾದ ಸಂಜೀವ್ ಮಿರ್ಜಿ ಶಾಲು ಹಾಗೂ ಕೃತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಚೇತನ್ ಕುಮಾರ ಓಕಳಿ, ಸಂಗಮೇಶ್, ಶಾರದಾ ಜಂಬಲದಿನ್ನಿ ,ಪ್ರಭು ನಿಸ್ಟಿ , ಕುಮಾರ ಅಮರಗೋಳ, ಅಶೋಕ್ ಕುಮಾರ್ ಸೋನಕಾವಡೆ, ಶಿವಯೋಗಿ ಎಂ ಕೋರಿ,ಅನಿಲ್ ಕುಮಾರ್ ಎಚ್ ಎನ್, ದತ್ತಾತ್ರೇಯ ಪಾಟೀಲ್, ಅನುಷಾ ಡಿ ಪಾಟೀಲ್ ಮತ್ತಿತರರು ಇದ್ದರು.
ಡಾ. ಸದಾನಂದ ಪೆರ್ಲ ಅವರಿಗೆಶಾಸಕ ಅಲ್ಲಮಪ್ರಭು ಪಾಟೀಲ್ ಅಭಿನಂದನೆ
ಕಲ್ಬುರ್ಗಿ : ಆಕಾಶ ವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸದಾನಂದ ಪೆರ್ಲ ಅವರು ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು ಕಳೆದ ಮೂರು ದಶಕಗಳ ಕಾಲ ಆಕಾಶವಾಣಿಗೆ ನೀಡಿದ ಅವರ ವಿಶೇಷ ಸೇವೆಯನ್ನು ಗೌರವಿಸಿ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ಅವರು ಶಾಲು ಹಾರ ನೀಡಿ ಆಕಾಶವಾಣಿಯಲ್ಲಿ ಮೇ 31ರಂದು ಗೌರವಿಸಿದರು.
ಡಾ ಪೆರ್ಲ ಅವರು ಕಲಬುರ್ಗಿ ಆಕಾಶವಾಣಿಯಲ್ಲಿ ಸುಮಾರು 20 ವರ್ಷಗಳಷ್ಟು ಕಾಲ ಅನುಪಮ ಸೇವೆ ಸಲ್ಲಿಸಿದ್ದನ್ನು ಈ ಭಾಗದ ಜನ ಸದಾ ಸ್ಮರಿಸುತ್ತಾರೆ ಮತ್ತು ಮುಂದೆ ಕೂಡ ಈ ಭಾಗಕ್ಕೆ ಅವರ ವಿಶಿಷ್ಟ ಸೇವೆ ಸಲ್ಲಬೇಕು ಅವರ ಭವಿಷ್ಯ ಉಜ್ವಲವಾಗಲಿ ಎಂದು ಅಲ್ಲಮಪ್ರಭು ಪಾಟೀಲ್ ಅವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಚೇತನ್ ಕುಮಾರ್ ಓಕಳಿ ಉಪಸ್ಥಿತರಿದ್ದರು.