ಆಕಾಶವಾಣಿಯ ಟಿ.ಡಿ.ಕುಲಕರ್ಣಿ ನಿವೃತ್ತಿ

ಕಲಬುರಗಿ,ಜು.29: ಕಲಬುರಗಿ ಆಕಾಶವಾಣಿ ಕೇಂದ್ರದ ತಾಂತ್ರಿಕ ವಿಭಾಗದಲ್ಲಿ ಹಿರಿಯ ಇಂಜಿನಿಯರ್ ಸಹಾಯಕರಾದ ಟಿ. ಡಿ. ಕುಲಕರ್ಣಿ ತಮ್ಮ 36 ವರ್ಷಗಳ ಸೇವೆಯಿಂದ ಜು.29 ರಂದು ನಿವೃತ್ತಿ ಹೊಂದಿದರು.

ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ನಿಲಯ ಮುಖ್ಯಸ್ಥರೂ, ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕರಾದ ಜಿ. ಗುರುಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. 1987ರಲ್ಲಿ ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ತಾಂತ್ರಿಕ ವಿಭಾಗಕ್ಕೆ ಸೇರಿದ ಕುಲಕರ್ಣಿಯವರು ಬಳಿಕ ಕಲಬುರಗಿ, ಭದ್ರಾವತಿ ಮತ್ತು ವಿಜಯಪುರ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.
‘ನಿವೃತ್ತಿ ಸಹಜ ಪ್ರಕ್ರಿಯೆಯಾದರೂ ಸಂಸ್ಥೆಗೆ ಕೊನೆಯ ದಿನದ ವರೆಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ಉನ್ನತಿಗೆ ಶ್ರಮಿಸಿದ ನೌಕರ ನಿಜಕ್ಕೂ ಸ್ಮರಣೀಯ’ ಹಾಗೂ ಅಭಿನಂದನೆಗೆ ಪಾತ್ರರಾಗುತ್ತಾರೆ ಎಂದು ಗುರುಮೂರ್ತಿ ಹೇಳಿದರು. ಕಾರ್ಯಕ್ರಮ ವಿಭಾಗದ ಅನಿಲ್ ಕುಮಾರ್ ಎಚ್. ಎನ್., ಡಾ. ಸದಾನಂದ ಪೆರ್ಲ, ಶಾರದಾ ಜಂಬಲದಿನ್ನಿ, ಹಾಗೂ ತಾಂತ್ರಿಕ ವಿಭಾಗದ ಪ್ರಭು ನಿಷ್ಠಿ, ಅಶೋಕ ಸೋಂಕಾವಡೆ, ಜಿ.ವಿ. ಕುಲಕರ್ಣಿ ಹಾಗೂ ಆಡಳಿತ ವಿಭಾಗದ ಜಿ. ವಿಜಯ ಕುಮಾರ ನಿವೃತ್ತರಿಗೆ ಶುಭ ಹಾರೈಸಿ ಭಾಷಣ ಮಾಡಿದರು. ನಂತರ ಟಿ. ಡಿ. ಕುಲಕರ್ಣಿ ಭಾಷಣ ಮಾಡಿ ಆಕಾಶವಾಣಿಯನ್ನು ಜನಪ್ರಿಯಗೊಳಿಸಬೇಕು ಎಂದು ಸಲಹೆ ನೀಡಿದರು.

ಸಂಗಮೇಶ್, ಸುರೇಶ್ ರಾಂಪುರೆ, ಸಯ್ಯದ್ ಅಸ್ರಾರ್, ಅನುಷಾ ಡಿ. ಕೆ, ಶ್ರೀಮಂತ ನಾಲವಾರ, ಅವಿನಾಶ ಮತ್ತಿತರರು ಇದ್ದರು.