ಆಕಾಶವಾಣಿಯಲ್ಲಿ “ ಕೊರೋನಾ ರೋಗಕ್ಕೆ ರೆಮಿಡೆಸಿವಿರ್–ಆ್ಯಕ್ಸಿಜನ್ ಅನಿವಾರ್ಯವೇ ” ವಿಶೇಷ ಮಾತುಕತೆ ಪ್ರಸಾರ

ಕಲಬುರಗಿ :ಎ.20: ಕಲಬುರಗಿ ಆಕಾಶವಾಣಿ ಕೇಂದ್ರವು ಏ. 21 ರಂದು ಬುಧವಾರ ಬೆಳಿಗ್ಗೆ 9.15 ಕ್ಕೆ “ ಕೊರೋನಾ ರೋಗಕ್ಕೆ ರೆಮಿಡೆಸಿವಿರ್ ಚುಚ್ಚುಮದ್ದು ಮತ್ತು ಆ್ಯಕ್ಸಿಜನ್ ಅನಿವಾರ್ಯವೇ ಎಂಬ ವಿಷಯ ಕುರಿತಾಗಿ ವಿಶೇಷ ಮಾತುಕತೆ ಪ್ರಸಾರ ಮಾಡಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ನಾಡೋಜ ಡಾ. ಪಿ . ಎಸ್. ಶಂಕರ್ ಮತ್ತು ಕಲಬುರಗಿ ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕರಾದ ಡಾ.ವಿಕ್ರಮಸಿದ್ದಾರೆಡ್ಡಿ ಭಾಗವಹಿಸಲಿರುವರು. ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್¯ ಈ ಮಾತುಕತೆ ನಡೆಸಿ ಕೊಡಲಿದ್ದಾರೆ.

ಸಾರ್ವಜನಿಕರಲ್ಲಿ ರೆಮಿಡೆಸಿವಿರ್ ಚುಚ್ಚುಮದ್ಧಿನ ಬಗ್ಗೆ ಇರುವ ಆತಂಕ ಹಾಗೂ ಆ್ಯಕ್ಸಿಜನ್ ಲಬ್ಯೆತೆ ಕುರಿತ ಸಂದೇಹಗಳಿಗೆ ತಜ್ಞರು ಮಾಹಿತಿ ನೀಡಿ ತಪ್ಪು ತಿಳುವಳಿಕೆ ಹೋಗಲಾಡಿಸಲು ಸಲಹೆ ನೀಡಿದ್ದಾರೆ. ಕೇಳುಗರು ‘newsonair’ ಮೊಬೈಲ್ ಆ್ಯಪ್ ಮೂಲಕವೂ ಕಾರ್ಯಕ್ರಮ ಕೇಳಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ