
ಕಲಬುರಗಿ:ಮೇ.23: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕಲ್ಬುರ್ಗಿ ಆಕಾಶವಾಣಿಯ ಜೊತೆ ಜೊತೆಯಲಿ ನೇರ ಫೋನ ಇನ್ ಸಂವಾದ ಕಾರ್ಯಕ್ರಮದಲ್ಲಿ ನಾಳೆ (ಬುಧವಾರ) ಬೆಳಗ್ಗೆ 10.30 ರಿಂದ 11:30ವರೆಗೆ ಭಾಗವಹಿಸಲಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ವಹಿಸಿದ ನಂತರ ಪ್ರಪ್ರಥಮ ಬಾರಿಗೆ ಕಲಬುರ್ಗಿ ಆಕಾಶವಾಣಿಯ ಕೇಳುಗರ ಜೊತೆ ಸಂವಾದ ನಡೆಸಲು ಜೋಶಿಯವರು ಆಗಮಿಸುತ್ತಿದ್ದು ಕನ್ನಡ ನಾಡು ನುಡಿ ಸಂಸ್ಕøತಿಯ ಸಂರಕ್ಷಣೆಯಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತಾಗಿ ಕೇಳುಗರು ಪ್ರಶ್ನೆಗಳನ್ನು ಕೇಳಬಹುದು ಆಕಾಶವಾಣಿಯ 29 5 9 8 6 ಮತ್ತು 2 9 5 9 8 7 (ಎಸ್ ಟಿ ಡಿ ಸಂಖ್ಯೆ 08472) ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂವಾದ ನಡೆಸಬಹುದು ಈ ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ