ಆಕಾಶಕ್ಕೆ ಚಿಮ್ಮುತ್ತಿದ್ದ ಕುಡಿಯುವ ನೀರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.26: ಇಲ್ಲಿನ ಬಾಪೂಜಿ ನಗರದ ಮೇನ್ ರೋಡ್ ನಲ್ಲಿ ನಿನ್ನೆ ಸಂಜೆ ಕುಡಿಯುವ ನೀರಿನ‌ ಸರಬರಾಜು ಮಾಡುವ ನೀರಿನ ಪೈಪ್ ಒಡೆದು ನೀರು ಆಕಾಶಕ್ಕೆ ಚಿಮ್ಮುತ್ತಿತ್ತು.
ರಸ್ತೆ ದುರಸ್ಥಿ ಕಾರ್ಯ ನಡೆಯುತ್ತಿದ್ದು ಇದರಿಂದಾಗಿ‌ ನೀರು ಸರಬರಾಜು ಮಾಡುವ ರೈಸಿಂಗ್ ಮೇನ್ ಪೈಪ್ ಗೆ ಡ್ಯಾಮೇಜ್ ಆಗಿ ನೀರು ಅಂದಾಜು 25 ಅಡಿಗೂ ಎತ್ತರದಲ್ಲಿ ಚಿಮ್ಮುತ್ತಿತ್ತು.
ಈ ಬಗ್ಗೆ  ವಾರ್ಡಿನ ಕಾರ್ಪೋರೇಟರ್,  ಸಾರ್ವಜನಿಕರ ದೂರಿನ ನಂತರ ಪಾಲಿಕೆ ಸಿಬ್ಬಂದಿ ನೀರು ಸರಬರಾಜು ನಿಲ್ಲಿಸಿ ಇಂದು ದುರಸ್ಥಿ ಕಾರ್ಯ ಕೈಗೊಂಡಿದ್ದಾರೆ.