ಆಕಾಂಕ್ಷೆಗಳ ಈಡೇರಿಕೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ

ಕೆ.ಆರ್.ಪೇಟೆ:ಮಾ:27: ಯಾವುದೇ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನಾನು ಕಸಾಪ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಕನ್ನಡ ಪರಿಚಾರಕನಾಗಿ ಕೆಲಸ ಮಾಡಲು ನನ್ನನ್ನು ಹೆಚ್ಚಿನ ಬಹುಮತದಿಂದ ಆಯ್ಕೆಮಾಡುವಂತೆ ರಾಜ್ಯ ಕಸಾಪ ಅಧ್ಯಕ್ಷ ಗಾಧಿಗೆ ಸ್ಪರ್ಧಿಸಿರುವ ನಾಡೋಜ ಡಾ.ಮಹೇಶ್ ಜೋಶಿ ಮನವಿ ಮಾಡಿದರು.
ಪಟ್ಟಣದಲ್ಲಿಂದು ಬಿರುಸಿನ ಸಂಚಾರ ನಡೆಸಿದ ಮಹೇಶ್ ಜೋಶಿ ಕಸಾಪದ ಪ್ರಮುಖರು ಮತ್ತು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂಲಕ ಮತಯಾಚನೆ ಆರಂಭಿಸಿದ ಜೋಶಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಬಿಜಿಎಸ್ ಶಿಕ್ಷಣ ಸಂಸ್ಥೆ, ಗ್ರಾಮ ಭಾರತಿ ವಿದ್ಯಾಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮುಂತಾದ ಕಡೆ ಕಸಾಪ ಸದಸ್ಯರನ್ನು ಸಂಪರ್ಕಿಸಿ ಮತಯಾಚನೆ ಮಾಡಿದರು. ಹಿರಿಯ ಸಾಹಿತಿ ವಿರೂಪಾಕ್ಷ ರಾಜಯೋಗಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿ.ಪಂ ಸದಸ್ಯ ಬಿ.ಎಲ್. ದೇವರಾಜು, ಜಿ.ಪಂ ಮಾಜಿ ಸದಸ್ಯ ಬಿ.ನಾಗೇಂದ್ರ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಗ್ರಾಮ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನ ಕುಮಾರ್, ವೀರಶೈವ ಸಮಾಜದ ಮುಖಂಡ ಕೆ.ಎಸ್.ಸುರೇಶ್ ಕುಮಾರ್, ಪಟ್ಟಣ ಪ್ರಮುಖ ಕೆ.ಎಸ್.ರಾಮೇಗೌಡ, ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಶಿಕ್ಷಕ ಸಂಘಟನೆಗಳ ಪ್ರಮುಖರನ್ನು ಸಂಪರ್ಕಿಸಿದ ಜೋಶಿ ತಮ್ಮ ಪ್ರಣಾಳಿಕೆಯ ಅಂಶಗಳನ್ನು ವಿವರಿಸಿ ಮತಯಾಚನೆ ಮಾಡಿದರು.
ತಾಲೂಕ ಘಟಕಕ್ಕೆ ಚುನಾವಣೆ ನಡೆಸಿ: ರಾಜ್ಯ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯ ಜೊತೆಯಲ್ಲಿಯೇ ತಾಲೂಕು ಘಟಕಕ್ಕೂ ಚುನಾವಣೆ ನಡೆಸುವಂತೆ ಬಹುತೇಕ ಕಡೆ ಸದಸ್ಯರು ಮಹೇಶ್ ಜೋಶಿಯವರಿಗೆ ಒತ್ತಾಯ ಮಾಡಿದರು.ಜಿಲ್ಲಾಧ್ಯಕ್ಷರ ಕಪಿ ಮುಷ್ಠಿಯಲ್ಲಿ ತಾಲೂಕು ಘಟಕಗಳು ಸಿಲುಕಿ ಕೊಂಡಿವೆ. ತಾಲೂಕು ಘಟಕದ ಅಧ್ಯಕ್ಷರಾಗಿ ಮುಂದುವರಿಯಬೇಕಾದರೆ ಜಿಲ್ಲಾಧ್ಯಕ್ಷರಿಗೆ ಕಾಲಕಾಲಕ್ಕೆ ಹಫ್ತಾ ಕೊಡಬೇಕಾದ ವಾತಾವರಣ ಕಸಾಪದಲ್ಲಿ ನಿರ್ಮಾಣವಾಗಿ. ಹಫ್ತಾ ಕೊಡದ ತಾಲೂಕು ಘಟಕದ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ವಜಾ ಮಾಡಿ ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ಆದೇಶಿಸುವ ಮೂಲಕ ತಾಲೂಕು ಮಟ್ಟದಲ್ಲಿ ಕೆಲಸ ಮಾಡುವ ಕಸಾಪ ಮುಖಂಡರುಗಳನ್ನು ಅಪಮಾನ ಮಾಡುತ್ತಾರೆ. ತಾಲೂಕು ಘಟಕಗಳಿಗೆ ನೀಡಬೇಕಾದ ಅನುದಾನದಲ್ಲಿ ಶೇ.25 ರಷ್ಟನ್ನು ಜಿಲ್ಲಾಧ್ಯಕ್ಷರುಗಳೇ ಇಟ್ಟುಕೊಳ್ಳುತ್ತಾರೆ. ಆದ ಕಾರಣ ತಾಲೂಕು ಘಟಕದ ಅಧ್ಯಕ್ಷರೂ ನೇರವಾಗಿ ಸದಸ್ಯರಿಂದ ಆಯ್ಕೆಯಾಗಬೇಕು ಮತ್ತು ತಾಲೂಕು ಘಕಟಗಳಿಗೆ ನೀಡುವ ಅನುದಾನವನ್ನು ನೇರವಾಗಿ ಕೇಂದ್ರ ಪರಿಷತ್ತು ತಾಲೂಕು ಘಟಕಗಳಿಗೆ ನೇರವಾಗಿ ಬಿಡುಗಡೆ ಮಾಡುವಂತೆ ಬಹುತೇಕ ಸದಸ್ಯರು ಜೋಶಿಯವರನ್ನು ಒತ್ತಾಯಿಸಿದರು.
ಹೈಕೋರ್ಟಿನ ನಿವೃತ್ತ ನ್ಯಾಯಾದೀಶ ಅರಳಿ ನಾಗರಾಜು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಎಸ್. ಮುದ್ದೇಗೌಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ನೀಲಕಂಠ, ಎಂ.ಕೆ.ಹರಿಚರಣತಿಲಕ್, ಕಸಾಪ ಸಂಚಾಲಕ ಚಾ.ಶಿ.ಜಯಕುಮಾರ್ ಇತರರಿದ್ದರು.