ಆಕಸ್ಮಿಕ ಬೆಂಕಿ-ಹಾನಿ

ಬ್ಯಾಡಗಿ, ಏ 3: ತಾಲೂಕಿನ ಛತ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪಂಚರ್ ಅಂಗಡಿಯೊಂದಕ್ಕೆ ಆಕ್ಮಸಿಕ ಬೆಂಕಿ ತಗುಲಿ ಸುಮಾರು 50ಸಾವಿರ ರೂಗಳಿಗೂ ಹೆಚ್ಚು ಹಾನಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಈ ಪಂಚರ್ ಅಂಗಡಿಯು ಅಮಾನುಲ್ಲಾ ಜಡದಿ ಎಂಬ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಛತ್ರ ಗ್ರಾಮದಲ್ಲಿರುವ ಟಿಪ್ಪರ್ ಗಾಡಿಗೆ ಜೋಡಣೆ ಮಾಡಲು ಟಿಪ್ಪರ್ ಗಾಡಿಯ ಚಾಲಕ ಟಾಯರ್‍ಗಳನ್ನು ಪಂಚರ್ ಅಂಗಡಿಯಲ್ಲಿಟ್ಟು ಹೋಗಿದ್ದರೆಂದು ತಿಳಿದು ಬಂದಿದ್ದು, ಆ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿಯಿಂದ ಈ ಅವಘಡ ಸಂಭವಿಸಿದೆ. ಸರಿಯಾದ ಸಮಯಕ್ಕೆ ಅಗ್ನಿಶಾಮಕ ವಾಹನವು ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.