ಆಕಸ್ಮಿಕ ಬೆಂಕಿ –  ಮನೆ ಭಸ್ಮ.

ಕೂಡ್ಲಿಗಿ. ಆ 18 :- ಆಕಸ್ಮಿಕ ಬೆಂಕಿ ತಗುಲಿದ ಅನಾಹುತದಿಂದ ವಾಸದ ಮನೆಯೊಂದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಸಮೀಪದ  ಓಬಳಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.ಗ್ರಾಮದ ಗೊಲ್ಲರ ನಿಂಗಮ್ಮ  ಎಂಬುವರ ಮನೆಯೇ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂ ನಷ್ಟವಾಗಿದೆ. ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದು ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ಸಂಭವಿಸಿದೆ.ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬರುವಷ್ಟರಲ್ಲಿ ಮನೆಯು ಭಾಗಶಃ ಸುಟ್ಟುಹೋಗಿತ್ತು  ಗ್ರಾಮಸ್ಥರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿಯನ್ನು ನಂದಿಸುವ ಮೂಲಕ ಅಕ್ಕಪಕ್ಕದ ಮನೆಗಳಿಗೆ ಆಗಬಹುದಾದ ಭಾರೀ ಅವಘಡ ತಪ್ಪಿಸಿದ್ದಾರೆ ಅಲ್ಲದೆ ಮನೆಯಲ್ಲಿದ್ದ ದವಸ ಧಾನ್ಯ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.