ಶಹಾಬಾದ್:ಜು.3:ತಾಲೂಕಿನ ಬಾಲುನಾಯಕ ತಾಂಡದ ನಿವಾಸಿ ದತ್ತು ಚವ್ಹಾಣ್ ಎಂಬುವವರ ಮನೆಗೆ ಅಕಸ್ಮಿಕವಾಗಿ ಬೆಂಕಿ ತಗಲಿ ಸಂಪೂರ್ಣ ಮನೆಯಲಿರುವ ವಸ್ತುಗಳ ಭಸ್ಮವಾಗಿದೆ.
ಮನೆಯವರು ಶನಿವಾರ ಸರಡಗಿಯ ಮೋಕತಾಂಡದ ದೇವಸ್ಥಾನದ ಜಾತ್ರೆಯ ನಿಮಿತ್ತ ತೆರಳಿದ್ದರು. ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಬೆಂಕಿ ತಗಲಲಿ ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಕಂಪ್ಯೂಟರ್, ಲ್ಯಾಪಟ್ಯಾಪ, ದಾಖಲೆಗಳು, ದವಸ ಧಾನ್ಯ, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಸುಮಾರು 4-5 ಲಕ್ಷದ ವಸ್ತುಗಳು ಬಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸ ಪಟ್ಟು, ಅಗ್ನಿಯ ಕೆನ್ನಾಲಿಗೆ ಸಂಪೂರ್ಣ ಮನೆಯನ್ನು ಬೆಂಕಿಗೆ ತೆಗೆದುಕೊಂಡಿದೆ. ಇದರಿಂದ ದತ್ತು ಚವ್ಹಾಣ್ ಅವರ ಕುಟುಂಬದವರು ಬೀದಿಗೆ ಬಿದ್ದಂತಾಗಿದೆ.
ವಿಷಯ ತಿಳಿದು ಊರಿಂದ ಆಗಮಿಸಿದ ಚವ್ಹಾಣ್ ಕುಟುಂಬ ಮನೆಯ ಸ್ಥಿತಿ ನೋಡಿ ಕಣ್ಣೀರಿಡುತ್ತಿದೆ. ಈ ಕುರಿತು ಮಾಡಬೂಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.