ಆಕಸ್ಮಿಕ ಬೆಂಕಿ ತಗುಲಿ ದಾಖಲೆ ಪತ್ರಗಳು ಭಸ್ಮ

ಚಡಚಣ: ಅ.29: ಸಮೀಪದ ಹಾವಿನಾಳ ಇಂಡಿಯನ್ ಸಕ್ಕರೆ ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಮಂಗಳವಾರ ನಸುಕಿನ ಸಮಯದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಮೂಲ್ಯ ಕಾಗದ ಪತ್ರಗಳು,ಕಂಪ್ಯೂಟರ್ ಗಳು ಸೇರಿದಂತೆ ಕಚೇರಿ ಪರಿಕರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಕಾರ್ಖಾನೆ ವ್ಯವಸ್ಥಾಪಕ ರಮಾಕಾಂತ ಪಾಟೀಲ,ಮಂಗಳವಾರ ನಸುಕಿನ 1.30 ಗಂಟೆ ಸಮಯದಲ್ಲಿ ಕಚೇರಿ ಕೊಠಡಿಯಲ್ಲಿ ಜ್ವಾಲೆ ಕಾಣಿಸಕೊಂಡಿದೆ.ಅಲ್ಲಿದ್ದ ಸೆಕ್ಯೂರಿಟಿ ಗಾರ್ಡಗಳು ಗಮನಿಸಿ ಅದನ್ನ ನಂದಿಸಲು ಪ್ರಯತ್ನಿಸುತ್ತಿದ್ದಂತೆ ಕೊಠಡಿಯಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡು,ನೋಡು ನೋಡುವಷ್ಟರಲ್ಲಿ ಕೊಠಡಿಯಲ್ಲಿದ್ದ ಎಲ್ಲ ಪರಿಕರಗಳು ಸುಟ್ಟು ಕರಕಲಾಗಿ ಹೋಗಿವೆ.ಅವಘಡದಲ್ಲಿ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ.ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.