ಆಕಸ್ಮಿಕ ಬೆಂಕಿ ತಗುಲಿ ದವಸ ಧಾನ್ಯ ಹಾಗೂ ಗೃಹ ಬಳಕೆಯ ವಸ್ತು ಸಂಪೂರ್ಣ ಸುಟ್ಟು ಭಸ್ಮ ; ರೈತ ಕಂಗಾಲು

ಆಲಮೇಲ:ನ.16:ಪಟ್ಟಣದ ಗುಂದಗಿ ರಸ್ತೆಯ ಬಿಳವಾರ ತೋಟದಲ್ಲಿ ಕೆಲಸಕ್ಕಿದ ಶಾಂತಪ್ಪ ಸುಗಠಾನ ಎಂಬ ರೈತನ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ದವಸ ದಾನ್ಯ ಹಾಗೂ ಗೃಹ ಬಳಕೆಯ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದು. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನಿಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಬುಧುವಾರ ಆಲಮೇಲ ಪಟ್ಟಣದಲ್ಲಿ ನಡೆದಿದೆ.
ಎಂದಿನಂತೆ ಬೆಳಗ್ಗೆ ರೈತ ಶಾಂತಪ್ಪ ಸುಗಠಾನ ತೋಟದಲ್ಲಿ ಹತ್ತಿ ಬಿಡಿಸುತ್ತಿರುವ ಸಂದರ್ಭದಲ್ಲಿ ಏಕಾಎಕಿ ತಾನು ವಾಸಿಸುತ್ತಿರುವ ತೋಟದ ಗುಡಿಸಲಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದರಿಂದ ತಕ್ಷಣ ಓಡಿ ಬಂದು ನೋಡುವಲ್ಲಿ ಗುಡಿಸಲ್ಲಿನಲ್ಲಿನ ದವಸ ದಾನ್ಯ ಹಾಗೂ ಗೃಹ ಬಳಕೆಯ ವಸ್ತುಗಳು,ಶಾಲಾ ಮಕ್ಕಳ ಹಾಗೂ ಬ್ಯಾಂಕ್ ದಾಖಲಾತಿಗಳು ಸಂಪೂರ್ಣ ಸುಟ್ಟಿರುವುದರಿಂದ ರೈತ ಶಾಂತಪ್ಪ ಸುಗಠಾನ ಹಾಗೂ ಆತನ ಪತ್ನಿ ಹಾಗೂ ಮಕ್ಕಳು ಈ ಘಟನೆಯಿಂದ ಕಂಗಾಲಾಗಿದ್ದಾರೆ.
ನಂತರ ಮಾತನಾಡಿದ ರೈತ ಶಾಂತಪ್ಪ ಸುಗಠಾನ ನನ್ನ ಸ್ವಂತ ಊರಾದ ಸಿಂದಗಿ ತಾಲೂಕಿನ ಭಂಕಲಗಿ ಗ್ರಾಮದಲ್ಲಿ ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ಸಂಸಾರ ನಡೆಸಲು ಸಾಧ್ಯವಾಗದೆ,ಆಲಮೇಲ ಪಟ್ಟಣದ ರಿಯಾಜ ಬಿಳವಾರ ಇವರ ತೋಟದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಾನು ಮತ್ತು ನನ್ನ ಹೆಂಡತಿ ಶ್ರೀದೇವಿ ಕೆಲಸ ಮಾಡಿಕೊಂಡು ಮಕ್ಕಳ ಅಭ್ಯಾಸದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದೆವು ಆದರೆ ಇವತ್ತು ನನ್ನ ಸಂಸಾರದಲ್ಲಿ ಇದ್ದಂತಹ ಅವಶಕತೆಯ ಎಲ್ಲ ವಸ್ತುಗಳು ಸುಟ್ಟು ಕರಗಲಾಗಿದು ಮುಂದೆ ಜೀವನ ನಡೆಸುವದು ಬಹಳ ಕಷ್ಟವಾಯಿತು ಎಂದು ತನ್ನ ಅಳಲನ್ನು ತೊಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಬನ್ನೇಟ್ಟಿ, ಪೊಲೀಸ್ ಠಾಣೆಯ ಸಿಬ್ಬಂದಿ ಎಸ್.ಕೆ.ವಾಘಮೋರೆ ಭೇಟಿ ನಿಡಿದ್ದಾರೆ.

ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ ಬಡ ರೈತ ಶಾಂತಪ್ಪ ಸುಗಠಾನ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಗೃಹ ಬಳಕೆಯ ವಸ್ತುಗಳು ಸುಟ್ಟಿರುವದರಿಂದ ುಪ ಜೀವನ ನಡೆಸುವದು ಬಹಳ ಕಷ್ಟವಾಗುತ್ತದೆ. ಅದಕ್ಕಾಗಿ ಶಾಸಕ ಅಶೋಕ ಮನಗೂಳಿಯವರು ಆ ರೈತನಿಗೆ ಜಿಲ್ಲಾಡಳಿತ ಅಥವಾ ತಾಲೂಕಾಡಳಿತದ ವತಿಯಿಂದ ಉಪಜೀವನ ನಡೆಸಲು ಸಹಾಯ ದೊಕಿಸಿಕೊಡಬೇಕು ಎಂದು ಕಳಕಳಿಯ ವಿನಂತಿ
ಮೋಹ್ಮದ ಉಮ್ಮರ ಬೆಣ್ಣೇಶೀರೂರ
ಆಲಮೇಲ