ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಭಸ್ಮ

ಔರಾದ:ಮಾ.24: ತಾಲ್ಲೂಕಿನ ಬೋರ್ಗಿ ಜೆ ಗ್ರಾಮದ ಅರ್ಜುನ ತಂದೆ ಹಾವಪ್ಪಾ ಎಂಬುವರ ಹೊಲದಲ್ಲಿ ಹುಲ್ಲಿನ ಭಣಮೆ ಹಾಗೂ ದನದ ಕೊಟ್ಟಿಗಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಅದೆ ಕೊಟ್ಟಿಗೆಯಲ್ಲಿ ಎರಡು ಎತ್ತುಗಳು ಮತ್ತು ಎರಡು ಹೋರಿಗಳಿದ್ದವು ಅವುಗಳಿಗೂ ಸಹ ಬೆಂಕಿ ತಗುಲಿ ಗಾಯಗೊಂಡಿವೆ. ಈ ಬಡ ರೈತನು ಕುಡಿಟ್ಟ ಮೇವು ಎಲ್ಲವೂ ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಈ ಕುರಿತು ಸಂತಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.