ಆಕಸ್ಮಿಕ ಬೆಂಕಿ: ಜಾನುವಾರು ಸಜೀವ ದಹನ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ 23: ದನದ ಕೊಠಡಿಗೆ ಆಕಸ್ಮಿಕ ಬೆಂಕಿ ತಗುಲಿ ಏಳು ಜಾನುವಾರುಗಳು ಸಜೀವ ದಹನವಾಗಿ, ಒಂದು ಜಾನುವಾರು ಪವಾಡ ಸದೃಶ್ಯವಾದ ರೀತಿಯಲ್ಲಿ ಪಾರಾದ ಘಟನೆ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ಸಿದ್ದಪ್ಪ ಹುಡೇದ ಎಂಬುವ ರೈತನಿಗೆ ಸೇರಿದ ಜಾನುವಾರುಗಳಾಗಿದ್ದು, ನಿನ್ನೆ ತಡರಾತ್ರಿ ದನದ ಕೊಠಡಿಗೆ ಬೆಂಕಿ ಬಿದ್ದಿದೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಏಳು ಜಾನುವಾರುಗಳು ಸಜೀವ ದಹನವಾಗಿದ್ದು, ಒಂದು ಜಾನುವಾರು ಮಾತ್ರ ಪಾರಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಲಘಟಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.