ಆಕಸ್ಮಿಕ ಬೆಂಕಿ:ಲಕ್ಷಕ್ಕೂ ಹೆಚ್ಚು ರೂ ಮೌಲ್ಯ ನಷ್ಟ

ಅರಕೇರಾ.ಏ.೧೨೦-ಕ್ಯಾದಿಗ್ಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಮಲ್ಲಾಪೂರು ತಾಂಡ ಗ್ರಾಮದಲ್ಲಿನ ಮೂರು ಜನರ ಸಹೋದರರು ಮುಂದಿನ ಖಾಲಿ ಜಾಗದಲ್ಲಿ ಕೂಡಿಹಿಟ್ಟ ಇಟ್ಟ ಸ್ಥಳದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಗಡ ಆಕಸ್ಮಿಕ ಬೆಂಕಿ ತಗುಲಿ ಲಕ್ಷರೂ. ಮೌಲ್ಯದ ೭ ಬಣವೇ ಸುಟ್ಟ ಪರಿಣಾಮವಾಗಿ ಜೋಳದ ಸೊಪ್ಪೆ ಭತ್ತಹುಲ್ಲು ಬಣವೆ, ಸುಟ್ಟು, ಒಕ್ಕುತನದ ಸಾಮಾಗ್ರಿಗಳು ಸೇರಿದಂತೆ ಕರಕಲಾದ ಘಟನೆ ರಾತ್ರಿ ವೇಳೆ ಸಂಭವಿಸಿದೆ.
ಗ್ರಾಮದ ಜನರು ಅರಕೇರಾ ಅಗ್ನಿಶಾಮಕ ಠಾಣೆಗೆ ತಕ್ಷಣ ದೂರವಾಣಿಯ ಮೂಲಕ ತಿಳಿಸಿದರು ತಕ್ಷಣವೇ ಅಗ್ನಿ ಶಾಮಕ ಠಾಣಾ ಅಧಿಕಾರಿಗಳಾದ ಮಾರ್ಕಂಡಯ್ಯಸ್ವಾಮಿ ಹಾಗೂ ಸಿಬ್ಬಂದಿವರ್ಗದವರು ಬಂದು ಬೆಂಕಿಯನ್ನು ನಂದಿಸಿದರು ಅಷ್ಟೋತ್ತಿಗೆ ೭ ಭಣವೇಗಳು ಸುಟ್ಟು ಕರಲಾಗಿದೆ.ಇನ್ನೂ ಪಕ್ಕದಲ್ಲಿ ಸಾಕಷ್ಟು ಬಣವೆಗಳಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಜಾನುವಾರುಗಳಿಗೆ ಸಂಗ್ರಹಿಸಿ ಇಟ್ಟಿದ್ದ.ಪೋಮಣ್ಣ ತಂದೆ ಈಶ್ವರಪ್ಪ ,ಬಾಷೆಪ್ಪ ತಂದೆ ಈಶ್ವರಪ್ಪ , ಮಹಾದೇವಪ್ಪ ತಂದೆ ಈಶ್ವರಪ್ಪ ಮೂರು ಜನ ಸಹೋದರರ ಪ್ರತಿಯೊಬ್ಬರುದು ತಲಾ ೨ ಟ್ಯಾಕ್ಟರ್ ಭತ್ತದ ಹುಲ್ಲು ೩ ಟ್ಯಾಕ್ಟರ್ ಸೊಪ್ಪೆ ಒಕ್ಕುಲುತನದ ಸಾಮಾನುಗಳಾದ ಕೂರಿಗೆ,ಕುಂಟೆ ಸೇರಿದಂಂತೆ ಸಾಮಗ್ರಿಗಳು ೩ಟ್ರೀಪಗಳಷ್ಟ ಗೊಬ್ಬರದ ತಿಪ್ಪೆ ಸೇರಿದಂತೆ ಸುಮಾರು ಮೂರುಜನರ ನಷ್ಠ ೧ಲಕ್ಷಕ್ಕೋ ಹೆಚ್ಚು ನಷ್ಠವಾಗಿದೆ
ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಬೇಟಿ: ಮಲ್ಲಾಪೂರು ತಾಂಡದ ಸದಸ್ಯರುಗಳು ಕ್ಯಾದಿಗ್ಗೇರಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಪದ್ಮ ಶ್ರೀ ಕ್ರೀಷ್ಟಪ್ಪ ನಾಯಕ, ಮಾಲಿಪಾಟೀಲ್, ಸದಸ್ಯಣಿ ನೀಲಮ್ಮ , ರಾಜಶೇಖರನಾಯಕ, ಬೇಟಿ ನೀಡಿ ವ್ಯಯಕ್ತಿಕವಾಗಿ ಜಾನುವಾರುಗಳಿಗೆ ಮೇವು ಖರಿದಿಸಲು ೫ ಸಾವಿರೂಪಾಯಿಗಳು ನೀಡಿದರು.
ವ್ಯಯಕ್ತಿಕವಾಗಿ ಇಂದು ಘಟನೆ ಸ್ಥಳಕ್ಕೆ ಅರಕೇರಾದ ಕಂದಾಯ ಇಲಾಖೆ ಅಧಿಕಾರಿಗಳಾದ ಬೀಮರಾಯನಾಯಕಮೇಟಿ ಗ್ರಾಮ ಲೆಕ್ಕಾದಿಕಾರಿಗಳಾದ ಶರಣಬಸವ, ಅಭಿವೃದ್ದಿ ಅಧಿಕಾರಿ ಸಿ.ಬಿ.ಪಾಟೀಲ್ ಗ್ರಾಮದ ಮುಖಂಡರಾದ ಕ್ರೀಷ್ಟಪ್ಪನಾಯಕ ಮಾಲಿಪಾಟೀಲ್ ರಾಜಶೇಖರನಾಯಕ,ಖೇಮಣ್ಣ,ಚನ್ನಪ್ಪ, ಧರ್ಮಣ್ಣ, ಮೌಲಾಲಿ, ಚನ್ನಪ್ಪ, ಬಾಷ, ಅಮರೇಶ ಮುಂತಾದವರು ಉಪಸ್ಥಿತರಿದ್ದರು. ನಷ್ಟಕ್ಕೋಳಗಾದ ಮೂರು ಜನ ಸಹೋದರರಿಗೆ ಬೆಂಕಿ ಆಹುತಿಯಾದ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಇಲ್ಲಿನ ನಿವಾಸಿಗಳು ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದಾರೆ.