ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆಗಳು ಸುಟ್ಟು ಭಸ್ಮ


ಹರಿಹರ.ಜ .14;  ಬೆಂಕಿ ಅವಘಡ ಸಂಭವಿಸಿ 5 ಹುಲ್ಲಿನ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಗರದ ಮೆಟ್ಟಿಲ  ಹೊಳೆಯ ರಸ್ತೆಯಲ್ಲಿ ನಡೆದಿದೆ ಹಸುಗಳ ಆಹಾರಕ್ಕಾಗಿ ಸಂಗ್ರಹವಾಗಿ ಇಟ್ಟಿದ್ದ ಭತ್ತದ ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಬೆಂಕಿ ಬಿದ್ದ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸುವುದಕ್ಕೆ  ಮುಂದಾದರು 
ವೃತ್ತ ನಿರೀಕ್ಷಕ ಸತೀಶ್  ಕುಮಾರ್ ಯು .ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸಮೀರಾ ಅಹ್ಮದ್. ನಗರ ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ಅಗ್ನಿ ಶಾಮಕ ಠಾಣೆಯ ಸಹಾಯಕ ಅಧಿಕಾರಿ ಆರ್ ಸಂಜೀವ್ ಕುಮಾರ್ .ಗಣೇಶ್ ತಳವಾರ್. ಕೆಎಸ್ ಆಂಜನೇಯ .ಎಚ್ ಮೋಹನ್ ಜೀತ.ಸ್ಥಳೀಯರಾದ ಜಗದೀಶ ಚೂರಿ  ಬಣವೆಯ ಮಾಲೀಕರುಗಳು ಸ್ಥಳದಲ್ಲೇ ಇದ್ದರು ಬೆಂಕಿ ಅವಘಡ ಸಂಬಂಧಿಸಿದಂತೆ  ಪೊಲೀಸ್ ಇಲಾಖೆ ಕಂದಾಯ ಇಲಾಖೆ ಮುಂದಿನ ತನಿಖೆ ಕೈಗೊಂಡಿದ್ದಾರೆ