ಆಕಸ್ಮಿಕ ಅಗ್ನಿ ಅವಘಡ ಎರಡು ಅಂಗಡಿಗಳಿಗೆ ಅಪಾರ ಪ್ರಮಾಣದ ಹಾನಿ

ಕೆಂಭಾವಿ:ಎ.21:ಪಟ್ಟಣದ ಹಳೇ ಬಸ ನಿಲ್ದಾಣ ಹತ್ತಿರ ನಿನ್ನೆ ಸಂಜೆ ಆಕಸ್ಮಿಕ ಅವಘಡವೊಂದು ನಡೆದಿದ್ದು ಅಗ್ನಿ ಅವಘಡದಲ್ಲಿ ಒಂದು ಎಲೆಕ್ಟ್ರಿಕ್ ಅಂಗಡಿ ಸೇರಿದಂತೆ ಪಕ್ಕದ ಹೋಟೆಲಗೂ ಅಪಾರ ಪ್ರಮಾಣ ಹಾನಿಯಂಟಾಗಿದೆ ಘಟನೆಗೆ ಮೂಲಕಾರಣ ವಿದ್ಯುತ್ ಶಾರ್ಟ ಎಂದು ತಿಳಿದು ಬಂದಿದೆ.ಪದೇ ಪದೇ ಕೆಂಭಾವಿ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದು ಈ ಭಾಗದಲ್ಲಿ ಅಗ್ನಿಶಾಮಕದಳದ ಕೇಂದ್ರದ ಅವಶ್ಯಕತೆ ಇದ್ದು ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಗಮನ ವಹಸಲಿ ಎನ್ನುವುದು ಪಟ್ಟಣ ಜನದ ಆಶಯವಾಗಿದೆ.