ಆಂಬ್ಯುಲೆನ್ಸ್-ಟ್ಯಾಂಕರ್ ಡಿಕ್ಕಿತಡರಾತ್ರಿ ನಡೆದ ಘಟನೆ: ಸಂಚಾರ ವ್ಯತ್ಯಯ


ಬೆಳ್ತಂಗಡಿ, ನ.೨೫- ಆಂಬ್ಯುಲೆನ್ಸ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವುಂಟಾದ ಘಟನೆ ಗುರುವಾರ ತಡರಾತ್ರಿ ಇಲ್ಲಿನ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ನಡೆದಿದೆ.  
ಅಪಘಾತದಿಂದಾಗಿ ಸರಿಸುಮಾರು ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಂ ಉಂಟಾಗಿದೆ. ಸಂಜೆಯ ವೇಳೆ ಘಟನಾ ಸ್ಥಳದ ಅನತಿ ದೂರದಲ್ಲಿ ಇನ್ನೊಂದು ಆಂಬ್ಯುಲೆನ್ಸ್ ಹಾಗೂ ರಿಕ್ಷಾ ಪರಸ್ಪರ ಢಿಕ್ಕಿಯಾಗಿತ್ತು. ರಾತ್ರಿ ಇನ್ನೊಂದು ಆಂಬ್ಯುಲೆನ್ಸ್ ಮತ್ತು ಲಾರಿ ಪರಸ್ಪರ ಢಿಕ್ಕಿಯಾಗಿದೆ. ಪ್ರದೇಶದಲ್ಲಿ ಸಂಜೆ ಸುರಿದ ವಿಪರೀತ ಮಳೆಗೆ ರಸ್ತೆ ಜಾರುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.