ಆಂಬ್ಯುಲೆನ್ಸ್ ಚಾಲಕರಿಗೆ ಪಿಪಿಇ ಕಿಟ್ ವಿತರಣೆ

ಪುತ್ತೂರು, ಮೇ ೩೧- ಶಾಸಕರ ವಾರ್‌ರೂಂ ಮತ್ತು ದಾನಿಗಳ ಸಹಕಾರದೊಂದಿಗೆ ತಾಲೂಕಿನ ೧೧ ಆಂಬ್ಯುಲೆನ್ಸ್ ಚಾಲಕರಿಗೆ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್‌ನ್ನು ಭಾನುವಾರ ಪಕ್ಷದ ಕಚೇರಿ ಆವರಣದಲ್ಲಿ ವಿತರಿಸಲಾಯಿತು.
ಕಿಟ್ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಂಬ್ಯುಲೆನ್ಸ್ ಚಾಲಕರು ಜೀವ ಉಳಿಸುವವರು. ಜನರ ಜೀವ ರಕ್ಷಿಸುತ್ತಿರುವ ಆಂಬ್ಯಲೆನ್ಸ್ ಚಾಲಕರು ರೋಗಿಗಳ ಆರೋಗ್ಯ ರಕ್ಷಣೆಯ ಜೊತೆಗೆ ಚಾಲಕರು ಸುರಕ್ಷಿತವಾಗಿರಬೇಕು. ಅವರ ಕುಟುಂಬಸ್ಥರು ಸುರಕ್ಷಿತವಾಗಿರಬೇಕು. ಚಾಲಕರ ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆ ನೀಡಿ ಪಿಪಿಇ ಕಿಟ್ ಧರಿಸಿ ಚಾಲನೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ದೊರೆಯುವಂತಾಗಬೇಕು ಎಂದು ಹೇಳಿದ ಅವರು ಶುದ್ದ ಆಮ್ಲಜನಕ ದೊರೆಯಬೇಕೆಂಬ ಹಿನ್ನೆಲೆಯಲ್ಲಿ ಸೇವಾಹಿ ಸಂಘಟನೆಯ ಮೂಲಕ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೧೦೦೦ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಕೃಷ್ಣಪ್ರಸನ್ನ, ರಫೀಕ್ ದರ್ಬೆ, ಬಿಜೆಪಿ ನಗರ ಮಂಡಲದ ಕಾರ್ಯದರ್ಶಿ
ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.