ಆಂಬ್ಯುಲೆನ್ಸ್‌-ಸ್ಕೂಟರ್‌ ಅಪಘಾತ: ಸವಾರ ಮೃತ್ಯು

ಕಾಸರಗೋಡು, ಎ.೧೪- ಆಂಬ್ಯುಲೆನ್ಸ್‌ ಸ್ಕೂಟರ್ ನಡುವೆ ಅಪಘಾತದಲ್ಲಿ ಸ್ಕೂಟರ್‌ ಸಹಸವಾರನಾಗಿದ್ದ ಬಾಲಕನೋರ್ವ ಮೃತಪಟ್ಟು, ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಬದಿಯಡ್ಕದಲ್ಲಿ ನಡೆದಿದೆ.

ಬದಿಯಡ್ಕ ಪೆರಡಾಲದ ಅಬ್ದುಲ್ ಶಾಹಿಲ್ (16) ಮೃತಪಟ್ಟ ಬಾಲಕ. ಸ್ಕೂಟರ್ ಚಲಾಯಿಸುತ್ತಿದ್ದ ಮೂಕಂಪಾರೆಯ ಅಬ್ದುಲ್ ಸಮದ್ (19) ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಸರ್ಕಲ್‌‌ನಲ್ಲಿ ಅಪಘಾತ ನಡೆದಿದೆ. ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ತೆರಳುತ್ತಿಸಿದ್ದ ಆಂಬ್ಯುಲೆನ್ಸ್ ಮತ್ತು ಸ್ಕೂಟರ್ ನಡುವೆ ಅಪಘಾತ ನಡೆದಿದೆ, ಗಂಭೀರ ಗಾಯಗೊಂಡ ಇಬ್ಬರನ್ನು ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶಾಹಿಲ್ ಮೃತಪಟ್ಟಿದ್ದಾನೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.