ಆಂಬ್ಯುಲೆನ್ಸ್‌ಗೆ ಬೆಂಕಿ ಗಾಯಗೊಂಡ ಇಬ್ಬರು ಸಾವು

ಬೆಂಗಳೂರು,ಮೇ.೧-ನಗರದ ಹೊರವಲಯದ ದಾಬಸ್‌ಪೇಟೆ ಬಳಿ ನಿನ್ನೆ ಮಧ್ಯಾಹ್ನ ಕೊರೊನಾ ಸೋಂಕಿತನನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಾಬಸ್‌ಪೇಟೆಯ ರಾಷ್ಟ್ರೀಯ ಹೆದ್ದಾರಿ ೪ರ ಎಡೇಹಳ್ಳಿಯಲ್ಲಿ ಸಮೀಪ ಸಂಭವಿಸಿದ ಅವಘಡ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ತುಮಕೂರು ಮೂಲದ ಹಸೀನಾ (೪೦) ಹಾಗೂ ಸಾದಿಕ್ (೨೩) ಮೃತಪಟ್ಟವರು.
ಅಪಘಾತದಲ್ಲಿ ರೋಗಿ ಹಸೀನಾಗೆ ತೀವ್ರ ಸುಟ್ಟಗಾಯಗಳಾಗಿದ್ದವು, ಸೀನಾ ಸಂಬಂಧಿ ಸಾದಿಕ್ ತಲೆಗೆ ತೀವ್ರಗಾಯ ಮಾತ್ರವಲ್ಲದೆ, ಕಾಲು ಸಹ ಮುರಿದಿತ್ತು.
ತಕ್ಷಣ ಅವರನ್ನು ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಮೃತದೇಹಗಳನ್ನ ಸದ್ಯ ತುಮಕೂರಿನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.ಸರಣಿ ಅಪಘಾತದ ವೇಳೆ ಅವಘಡ ನಿನ್ನೆ ರೋಗಿ ಹಸಿನಾ ಸೇರಿ ೫ ಮಂದಿ ಆಂಬ್ಯುಲೆನ್ಸ್‌ನಲ್ಲಿ ಚಲಿಸುತ್ತಿದ್ದಾಗ ಆಂಬ್ಯುಲೆನ್ಸ್, ಕಂಟೇನರ್‌ಗೆ ಡಿಕ್ಕಿ ಹೊಡೆದಿತ್ತು.
ಇದೇ ವೇಳೆ ಆಂಬ್ಯುಲೆನ್ಸ್?ಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾದ ಬೆನ್ನಲ್ಲೇ ಆಂಬ್ಯುಲೆನ್ಸ್ ಧಗಧಗನೆ ಹೊತ್ತಿ ಉರಿಯಿತು.
ಘಟನೆ ಬೆನ್ನಲ್ಲೇ ಸ್ಥಳೀಯರು ಟ್ಯಾಂಕರ್ ವಾಹನದಿಂದ ಬೆಂಕಿ ನಂದಿಸಿದರು.
ಕೂಡಲೇ ಮತ್ತೊಂದು ಆಂಬುಲೆನ್ಸ್ ವಾಹನದ ಮೂಲಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹಸಿನಾ ಮತ್ತು ಸಾದಿಕ್ ಸಾವಿಗೀಡಾಗಿದ್ದಾರೆ.
ಈ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.