ಆಂಬುಲೆನ್ಸ್ ನಲ್ಲಿ ಗಂಡುಮಗು ಜನನ

ಕೊಟ್ಟೂರು ಏ 21 : ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಹೆರಿಗೆಯಾದ ಘಟನೆ ತಾಲೂಕಿನ ಗಾಣಗಟ್ಟ ಗ್ರಾಮದಲ್ಲಿ ನಡೆದಿದೆ. ಉಜ್ಜಯಿನಿ 108ಅಂಬಲೇನ್ಸ್ ಗಾಣಗಟ್ಟದಿಂದ ಮಂಜಮ್ಮಳನ್ನು
ಜಗಳೂರು ಆಸ್ಪತ್ರೆಗೆ ಕರೆದುಕೊಂಡು ಹಗುವ ಸಂದರ್ಭದಲ್ಲಿ ಹೆರಿಗೆ ನೊವು ಕಾಣಿಸಿಕೊಂಡ ಹಿನ್ನಲೆಯಲ್ಲಿ
ಆ್ಯಂಬುಲೆನ್ಸ್ ಶುಶ್ರೂಷಕ ಪೈಲಟ್ ಆ್ಯಂಬುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದರು. ಬಳಿಕ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ.