ಆಂಬಿಟಸ್ ವರ್ಲ್ಡ್ ಸ್ಕೂಲ್‌ಗೆ ಚಾಲನೆ

ಆನೇಕಲ್.ಫೆ.೨೮:ಬೆಂಡಗಾನಹಳ್ಳಿ ಗ್ರಾಮ ಬಳಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಂಬಿಟಸ್ ವರ್ಲ್ಡ್ ಸ್ಕೂಲ್ ಗೆ ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಎ.ಎಸ್.ಕಿರಣ್‌ಕುಮಾರ್ ರವರು ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ, ಕೇಂಬ್ರಿಡ್ಜ್‌ನ ಪ್ರಾದೇಶಿಕ ನಿರ್ದೇಶಕರಾದ ಮಹೇಶ್ ಶ್ರೀವಾಸ್ತವ, ಆಂಬಿಟಸ್ ವರ್ಲ್ಡ್ ಸ್ಕೂಲ್ ನ ಉಪಾಧ್ಯಕ್ಷ ಟಿ.ಪಿ.ಚಾರಿ, ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ನರೇಂದ್ರ, ಬೆಂಗಳೂರು ನಿರ್ದೇಶಕಿ ಶ್ರೀಮತಿ ನವೀನ ಹಾಗೂ ಶಾಲಾ ಮುಖ್ಯಸ್ಥೆ ಶ್ರೀಮತಿ ಹೆಲೆನಾ ಮತ್ತು ಶಿಕ್ಷಕರು ಹಾಗೂ ಪೋಷಕರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.