ಆಂಬಳಿ ಭಕ್ತರಿಗೆ ಅನ್ನಸಂತರ್ಪಣೆ

ಸಂಜೆ ವಾಣಿ ವಾರ್ತೆ
 ಕೊಟ್ಟೂರು ಸೆ 08: ತಾಲೂಕಿನ ಐತಿಹಾಸಿಕ ಅಂಬಳಿ ಕಲ್ಲೇಶ್ವರಸ್ವಾಮಿಯ 26ನೇ ವರ್ಷದ ಶ್ರಾವಣ ಮಾಸದ ನಿತ್ಯ ಪಂಚಾಭಿಷೇಕ ಮಹಾಮಂಗಲ ಹಾಗೂ ಮಹಾಪ್ರಸಾದ ವಿನಿಯೋಗ ಚಾನುಕೋಟಿ ಮಠದ ಡಾ.ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು.ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ತೆರಳಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಎ.ಷಡಕ್ಷರಪ, ಸಿದ್ದಲಿಂಗಪ್ಪ, ಗುತ್ತಿಗೆದಾರ ಬಸವರಾಜಪ್ಪ ಸೇರಿದಂತೆ ಅನೇಕ ರಿದ್ದರು.