ಆಂಧ್ರ ಶೈಲಿ ಚಿಕನ್ ಮಸಾಲ

ಬೇಕಾಗುವ ಸಾಮಗ್ರಿಗಳು

*ಚಿಕನ್ – ೧/೨ ಕೆ.ಜಿ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ –
*ಅಚ್ಚಖಾರದ ಪುಡಿ –
*ಚಕ್ಕೆ – ೨ ಪೀಸ್
*ಏಲಕ್ಕಿ – ೨
*ಲವಂಗ – ೨
*ಈರುಳ್ಳಿ – ೨
*ಧನಿಯಾ ಪುಡಿ – ೧ ಚಮಚ
*ಕಾಳು ಮೆಣಸಿನ ಪುಡಿ – ೧/೨ ಚಮಚ
*ಗರಂ ಮಸಾಲ – ೧/೨ ಚಮಚ
*ಟೊಮೆಟೋ – ೨
*ಕೊತ್ತಂಬರಿ ಸೊಪ್ಪು –
*ಕರಿಬೇವು – ೧೫ ಎಲೆ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೦೦ ಮಿ.ಲೀ
*ಹಸಿರು ಮೆಣಸಿನಕಾಯಿ – ೩

ಮಾಡುವ ವಿಧಾನ :

ಬೌಲಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ, ಉಪ್ಪು, ಚಿಕನ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಾಣಲಿಗೆ ಸ್ವಲ್ಪ ನೀರು ಹಾಕಿ, ಮಿಕ್ಸ್ ಮಾಡಿಟ್ಟಿರುವ ಚಿಕನ್‌ನ್ನು ಬಾಣಲಿಗೆ ಹಾಕಿ ಬೇಯಿಸಿ. ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿಯನ್ನು ಫ್ರೈ ಮಾಡಿ, ಧನಿಯಾ ಪುಡಿ, ಕಾಳು ಮೆಣಸಿನ ಪುಡಿ, ಗರಂ ಮಸಾಲ, ಟೊಮೆಟೋ ಹಾಗೂ ಉಪ್ಪನ್ನು ಬೇಯಿಸಿಟ್ಟುಕೊಂಡ ಚಿಕನ್‌ಗೆ ಸೇರಿಸಿ ಮುಚ್ಚಳ ಮುಚ್ಚಿ ಬೇಯಿಸಿ. ಕರಿಬೇವಿನ ಸೊಪ್ಪು ಮಿಕ್ಸ್ ಮಾಡಿದರೆ, ಆಂಧ್ರ ಶೈಲಿ ಚಿಕನ್ ಮಸಾಲ ರೆಡಿ.