ರಾಯಚೂರು, ಜು.೨೧- ಜಿಲ್ಲಾ ಟ್ರಾನ್ಸ್ ಜೆಂಡರ್ ಮೇಲೆ ಪಕ್ಕದ ಆಂಧ್ರಪ್ರದೇಶದ ಟ್ರಾನ್ಸ್ ಜೆಂಡರ್ ಅವರು ನಮ್ಮ ಮೇಲೆ ದೌರ್ಜನ್ಯ,ದಬ್ಬಾಳಿಕೆ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪ್ತಮಿತ್ರ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷ ಪ್ರಗತಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜುಲೈ ೧೭ ರಂದು ಆಂಧ್ರಪ್ರದೇಶ ಟ್ರಾನ್ಸ್ ಜೆಂಡರ್ ನವರು ಜಿಲ್ಲೆಯಲ್ಲಿ ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದ್ದಾಗ ಯಾರು ನೀವು ಎಂದು ಕೇಳಿದ್ದಕ್ಕೆ ಅವರು ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ನಾವು ಮಾತನಾಡಿ ಮಾತುಗಳನ್ನು ನಮ್ಮ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿಕೊಂಡು ಆ ರೆಕಾರ್ಡ್ ಅನ್ನು ಬೇರೆ ಆಂಧ್ರಪ್ರದೇಶ ವ್ಯಕ್ತಿಗಳಿಗೆ ಹಾಕಿದಾಗ ಅವರು ನಮಗೆ ಕರೆ ಮಾಡಿ ನೀವು ರಾಯಲಸಿಮಾ ವ್ಯಕ್ತಿಗಳಾಗಬೇಕು.ಕರ್ನಾಟಕದವರು ಎಂದು ಹೇಳಬಾರದು ಕೇವಲ ಬೆಂಗಳೂರಿನಲ್ಲಿ ಮಾತ್ರ ಕರ್ನಾಟಕದವರು ಎಂದು ಹೇಳಬೇಕು ಎಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಕೂಡಲೇ ನಮಗೆ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಖಾಜಲ್, ಶೀರಿಷ,ಸೀಮಾ ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.