ಆಂಧ್ರದಲ್ಲಿ ಟಿಡಿಪಿ, ಒಡಿಶಾದಲ್ಲಿ ಅರಳಿದ ಕಮಲ

ಜಗನ್‌ಗೆ ಮುಖಭಂಗ

ನವದೆಹಲಿ, ಜೂ. ೪- ತೀವ್ರ ಕುತೂಹಲ ಕೆರಳಿಸಿದ್ದ ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಆಂಧ್ರದಲ್ಲಿ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಟಿಡಿಪಿ ದಿಗ್ವಜಿಯ ಸಾಧಿಸಿದೆ. ೧೩೭ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ನಿಚ್ಚಳ ಬಹುಮತ ದಾಖಲಿಸಿದೆ. ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಧೂಳಿಪಟವಾಗಿದೆ. ಒಡಿಶಾದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಅಧಿಕಾರದ ಚುಕ್ಕಾಣಿಯತ್ತ ದಾಪುಗಾಲು ಹಾಕಿದೆ.
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಎನ್‌ಡಿಎ ಜೊತೆ ಕೈ ಜೋಡಿಸಿ ರಾಜ್ಯದಲ್ಲಿ ಜಗನ್ ಆಡಳಿತದ ವೈಫಲ್ಯಗಳನ್ನು ಸಮರ್ಥವಾಗಿ ಬಳಿಸಿಕೊಂಡಿದ್ದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ.
ಆಂಧ್ರಪ್ರದೇಶ ೧೭೫ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳಿಗೂ ಚುನಾವಣಾ ನಡೆದಿತ್ತು. ಟಿಡಿಪಿ ೧೩೧, ವೈಎಸ್ ಆರ್ ಕಾಂಗ್ರೆಸ್ ೨೦, ಜನಸೇನಾ ೧೮, ಬಿಜೆಪಿ ೭ ಕ್ಷೇತ್ರಗಳಲ್ಲಿ ಜಯಸಾಧಿಸಿದರೆ ಕಾಂಗ್ರೆಸ್ ಯಾವುದೇ ಸ್ಥಾನ ೧ ಗಳಿಸಲು ವಿಫಲವಾಗಿದ್ದು ಆಂಧ್ರದಲ್ಲಿ ಸಂಪೂರ್ಣ ನೆಲಕಚ್ಚಿದೆ.
ಮತ್ತೊಂದೆಡೆ ಒಡಿಶಾ ರಾಜ್ಯದಲ್ಲೂ ೧೪೭ ಸದಸ್ಯ ಬಲದ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಒಡಿಶಾ ಮುಖ್ಯಮಂತ್ರಿ ಆಡಳಿತಕ್ಕೆ ಮತದಾರರ ತಿಲಾಂಜಲಿ ನೀಡಿದ್ದಾನೆ. ಈ ಬಾರಿ ಬಿಜೆಪಿ ಜಯಭೇರಿ ಬಾರಿಸಿದ್ದು, ೭೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಬಿಜೆಡಿ ೫ ವರ್ಷಗಳ ಆಡಳಿತ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಆದರೆ ಈ ಬಾರಿ ಒಡಿಶಾ ಆಡಳಿತ ವಿರೋಧಿ ಅಲೆ ಕಂಡು ಬಂದಿದ್ದು, ಮತದಾರ ಬಿಜೆಪಿಗೆ ಒಲವು ತೋರಿದ್ದಾನೆ. ಬಿಜೆಡಿ ೫೪ ಸ್ಥಾನಗಳಲಿ ಗೆಲುವು ಸಾಧಿಸದರೆ ಕಾಂಗ್ರೆಸ್ ೧೧ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತರರು ೩ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಫಲರಾಗಿದ್ದಾರೆ.