ಆಂಧ್ರದಲ್ಲಿ ಗ್ರಾಮಸ್ಥರಿಂದ ನಾಲ್ಕು ಹುಲಿಮರಿಗಳ ರಕ್ಷಣೆ

ತಿರುಪತಿ, ಮಾ ೯- ಅಂಧ್ರಪ್ರದೇಶದ ಆತ್ಮಾಕೂರು ಅರಣ್ಯ ವಲಯದಲ್ಲಿ ತಾಯಿಯಿಂದ ತಪ್ಪಿಸಿಕೊಂಡ ಪರದಾಡುತ್ತಿದ್ದ ನಾಲ್ಕು ಹುಲಿಮರಿಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ನಡೆದಿದೆ.

ನಂದ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ಪೆದ್ದ ಗುಮ್ಮದಪುರಂನಲ್ಲಿ ಗ್ರಾಮಸ್ಥರು ಹುಲಿಮರಿಗಳನ್ನು ರಕ್ಷಣೆ ಮಾಡಿದ್ದಾರೆ.

ಅರಣ್ಯಕ್ಕೆ ಹೊಂದಿಕೊಂಡಿರುವ ಪೆದ್ದ ಗುಮ್ಮದಪುರಂನ ಹೊಲದಲ್ಲಿನ ಫಾರ್ಮ್ ಹೌಸ್ ಬಳಿ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಗ್ರಾಮಸ್ಥರು ಅವನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ದಾರಿ ತಪ್ಪಿ ಕೃಷಿ ಹೊಲಕ್ಕೆ ನುಗ್ಗಿದ್ದ ಮರಿಗಳು ಗ್ರಾಮಸ್ಥರಿಗೆ ಪತ್ತೆಯಾಗಿವೆ. ಬೀದಿ ನಾಯಿಗಳಿಂದ ರಕ್ಷಿಸಲು ಅವರು ಮೊದಲು ಅವುಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಪಶುವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ೩೦೦ ಸದಸ್ಯರ ತಂಡ ಹುಲಿಗಾಗಿ ಹುಡುಕಾಟ ನಡೆಸಲಾಯಿತು. ಅವರು ಪಗ್ ಗುರುತುಗಳನ್ನು ಕಂಡುಕೊಂಡು ಮತ್ತು ಶೀಘ್ರದಲ್ಲೇ ಹುಲಿಯನ್ನು ಪತ್ತೆಹಚ್ಚಲು ಮುಂದಾದರು, ಹುಲಿ ಟಿ-೧೦೮ ಇರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು.

ಇನ್ನು ಈ ಹುಲಿ ಮರಿಗಳ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಹುಲಿ ಮರಿಗಳನ್ನು ರಕ್ಷಣೆ ಮಾಡಿರುವ ಪೆದ್ದ ಗುಮ್ಮದಪುರಂನ ಗ್ರಾಮಸ್ಥರನ್ನು ಕೊಂಡಾಡಿದ್ದಾರೆ.