ಆಂಧ್ರದಲ್ಲಿ ಒಂದು ವರ್ಷ ಗುಟ್ಕಾ, ಪಾನ್ ಮಸಾಲಾ ನಿಷೇಧ

ವಿಜಯವಾಡ,ಡಿ.೭- ತಂಬಾಕು, ನಿಕೊಟಿನ್ ಹಾಗೂ ಇತರೆ ತಂಬಾಕಿನ ಉತ್ಪನ್ನಗಳ ತಯಾರಿಕೆಯಾದ ಗುಟ್ಕಾ ಹಾಗೂ ಪಾನ್ ಮಸಾಲಗಳ ಮಾರಾಟವನ್ನು ಆಂಧ್ರಪ್ರದೇಶ ಸರ್ಕಾರ ನಿಷೇಧಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಅಡಿಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ.
ಇಂದಿನಿಂದ ಒಂದು ವರ್ಷದವರೆಗೆ ಈ ನಿಯಮವೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಪದಾರ್ಥಗಳನ್ನು ಹೊಂದಿರುವ ಗುಟ್ಕಾ, ಪಾನ್ ಮಸಾಲ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟದಿಂದ ಅಪಾರ ಹಾನಿಯಾಗುತ್ತದೆ. ಅದನ್ನು ತಿನ್ನುವುದರಿಂದ ಹೃದಯಕ್ಕೆ ಕಾಯಲೆಗಳು ಬರುವ ಸಾಧ್ಯತೆಯಿದ್ದು, ಇದರಿಂದಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಜಗಿಯುವ ತಂಬಾಕು, ಖೈನಿ, ಖರ್ರಾ, ಪರಿಮಳಯುಕ್ತ ತಂಬಾಕು ಹೀಗೆ ವಿವಿಧ ಬಗೆಯಲ್ಲಿ ಪ್ಯಾಕ್ ಮಾಡಲಾಗುವ ತಂಬಾಕು ಮಾರಾಟವನ್ನು ಇಡೀ ಆಂಧ್ರಪ್ರದೇಶದಲ್ಲಿ ಒಂದು ವರ್ಷಗಳ ಕಾಲ ನಿಷೇಧಿಸಲಾಗಿದೆ.