ಆಂದ್ರಪ್ರದೇಶ ವೀರಶೈವ ಲಿಂಗಾಯತ ಮಹಾಸಭಾದರಾಜ್ಯ ಅಧ್ಯಕ್ಷ ಶಿವಾನಂದರಿಗೆ  ಹುಟ್ಟು ಹಬ್ಬದ ಸಂಭ್ರಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.24: ಅಖಿಲ ಭಾರತ ವೀರಶೈವ ಮಹಾಸಭಾದ ಆಂದ್ರಪ್ರದೇಶದ ರಾಜ್ಯ ಅಧ್ಯಕ್ಷ ದಂಡಿನ ಶಿವಾನಂದ ಅವರಿಗೆ.  ಸ್ವಗ್ರಾಮ ಉರವಕೊಂಡ ಮಂಡಲದ ಪಾಲ್ತೂರಿನಲ್ಲಿ ಗ್ರಾಮದ ಜನತೆ ಅದ್ದೂರಿಯಾಗಿ ಅವರ ಜನ್ಮದಿನದವನ್ನು ಸಂಭ್ರಮದಿಂದ ಆಚರಿಸಿದರು.
ಗ್ರಾಮದ ಕೊಲ್ಲಾಪುರಮ್ಮ ದೇವಿಯ ದೇವಸ್ಥಾನದ ಉದ್ಘಾಟನೆ ಫೆ.22 ರಂದು ನಡೆಯಿತು. ಅಂದು ಶಿವಾನಂದ ಅವರ ಜನ್ಮ ದಿನವಾಗಿದ್ದರಿಂದ. ಗ್ರಾಮದ ಹಾಗು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನತೆ ಸೇರಿ. ಶಿವಾಂದ ದಂಪತಿಗಳನ್ನು ಸಾರೋಟದಲ್ಲಿ ಮೆರವಣಿಗೆ ಮಾಡುವ ಮೂಲಕ ವಿಜೃಂಬಣೆಯಿಂದ …ಜನ್ಮ ದಿನವನ್ನು ಆಚರಿಸಲಾಯ್ತು.
ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನೆಗೆ ಬಂದರೆ ಇಲ್ಲಿನ ಜನತೆ ಅಭಿಮಾನದಿಂದ ನನ್ನ ಜನ್ಮ ದಿನವನ್ನು ಅದ್ದೂರಿಯಾಗಿ ಕೈಗೊಂಡಿದ್ದಕ್ಕೆ ಅವರಿಗೆ ನಾನು ಆಭಾರಿಯಾಗಿರುವೆ ಎಂದಿದ್ದಾರೆ ಶಿವಾನಂದ ಅವರು.