ಆಂದೋಲ ಶ್ರೀಗೆ ಬಿಜೆಪಿ ಟಿಕೆಟ್ ನೀಡಿ: ಮುತಾಲಿಕ್

ಯಡ್ರಾಮಿ:ಜ.13: ಬಿಜೆಪಿ ವರಿಷ್ಠರು ಆಂದೋಲ ಸಿದ್ದಲಿಂಗ ಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಿದರೆ ಕಲಬುರ್ಗಿ ಭಾಗದಲ್ಲಿ ಬಿಜೆಪಿ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಲ್ಲಿ ಹಮ್ಮಿಕೊಂಡ ಹಿಂದು ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ದೇಶದಲ್ಲಿ ಮೂರು ದುಷ್ಟ ಶಕ್ತಿಗಳಿಂದ ದೇಶ ಉಳಿಸಬೇಕಾಗಿದೆ ಆ ಮೂರು ದುಷ್ಟ ಶಕ್ತಿಗಳು ಇಸ್ಲಾಂ ಕ್ರಿಶ್ಚಿಯನ್ ಕಮ್ ಮಿನಿಸ್ಟರ್ ಹಾಗೂ ಬುದ್ಧಿಜೀವಿಗಳಿಂದ ಈ ದೇಶ ಉಳಿಯಬೇಕಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು ಹಿಂದೂ ವಿರೋಧಿಗಳಿಂದ ಭ್ರಷ್ಟರಿಂದ ಭಯೋತ್ಪಾದಕರಿಂದ ಉಳಿಯಬೇಕಾಗಿದೆ ಹಿಂದುಗಳು ಒಗ್ಗಟ್ಟಾಗಬೇಕು ಹಿಂದೂ ಧರ್ಮದ ಒಳಪಂಗಡಗಳು ಮರೆತು ಧರ್ಮರಕ್ಷಣೆಗೆ ಮುಂದಾಗಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿqಕ್ ಹೇಳಿದರು ಪಟ್ಟಣದ ಸರ್ದಾರ್ ಶರಣಗೌಡ ವೃತ್ತದ ಹತ್ತಿರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಹಿoದು ಸಂತ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾಷಣಕಾರಾಗಿ ಚೈತ್ರ ಕುಂದಾಪುರ ಮಾತನಾಡುತ್ತಾ ಭಾರತದಲ್ಲಿರುವ ಪ್ರತಿಯೊಬ್ಬ ಹಿಂದುಗಳು ದೇಶ ಅಭಿಮಾನ ಬೆಳೆಸಿಕೊಳ್ಳಬೇಕೆಂದರು. ನಂತರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಮಾತನಾಡುತ್ತಾ ಅವರು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ನೇತೃತ್ವವನ್ನು ಶ್ರೀ ರಾಮ ಸೇನಾ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗಸ್ವಾಮಿಗಳು ಮಾತನಾಡುತ್ತಾ ಸ್ವಾಮಿ ವಿವೇಕಾನಂದ ಅವರು ಕಾಮ ಗೋದ್ರ ತೇಲ್ಸಿದ ಮಹಾ ಸನ್ಯಾಸಿ ಸ್ವಾಮಿ ವಿವೇಕಾನಂದ ಎಂದರು. ಸುಂಬುಡ ರಸ್ತೆಯಲ್ಲಿರುವ ಕಡಕೋಳ ಶಾಖಾ ಮಠದಿಂದ ಮೆರವಣಿಗೆ ಚಾಲನೆ ಮಾಡಿ ಅಂಬೇಡ್ಕರ್ ವೃತ್ತ ಮಾರ್ಗದಿಂದ ಹಾಗೂ ಬಸವೇಶ್ವರ ಮಾರ್ಗದ ಮೂಲಕ ಸರ್ದಾರ್ ಶರಣ ಗೌಡ ವೃತ್ತದ ವರೆಗೆ ತಲುಪಿತು ಸಾನಿಧ್ಯ ಸೋನ್ನ ಶ್ರೀ ಶಿವಾನಂದ ಸ್ವಾಮಿಗಳು ಜೆರಟಿಗಿ ಮಹಾಂತ ಸ್ವಾಮಿಗಳು ಸ್ವಾಮಿಗಳು ಆಲೂರು ಶ್ರೀಗಳಾದ ಕೆಂಚ ಅಡವೆಂದ್ರ ಸ್ವಾಮಿಗಳು ಸಿದ್ದಲಿಂಗ ಮಹಾಸ್ವಾಮಿಗಳು ನೆಲೋಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲಿನಾಥ ಗೌಡ ಪಾಟೀಲ್ ಯಲಗೋಡ, ದಂಡಪ್ಪ ಸಾಹು ಕುಳಗೇರಿ, ರೇವಣಸಿದ್ದಪ್ಪ ಸಂಕಾಲಿ, ಶ್ರೀರಾಮ್ ಸೇನೆ ತಾಲೂಕ ಅಧ್ಯಕ್ಷ ಸಿದ್ದು ನಾಯ್ಕೋಡಿ ಹಂಗರಗಿ ನಗರ ಘಟಕ ಅಧ್ಯಕ್ಷ ಮಡಿವಾಳಪ್ಪ ತಳವಾರ ಆನಂದ ಕುಸ್ತಿ ರುದ್ರಗೌಡ ಅನೇಕರಿದ್ದರು.