ಆಂದೋಲಾ ಗ್ರಾಪಂ ಜೆಡಿಎಸ್ ವಶಕ್ಕೆ : ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆಅಧ್ಯಕ್ಷೆಯಾಗಿ ಬಸಮ್ಮ, ಉಪಾಧ್ಯಕ್ಷರಾಗಿ ಶರಬಯ್ಯ

ಜೇವರ್ಗಿ :ಆ.5: ತಾಲೂಕಿನ ಆಂದೋಲಾ ಗ್ರಾಮ ಪಂಚಾಯತ್‍ನ ಎರಡನೇ ಅವಧಿಗೆ ಅಧ್ಯಕ್ಷ-ಉಪಾದ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಸಮ್ಮ ಮಾಚಣ್ಣ ಶಹಾಪೂರ ಹಾಗೂ ಶರಬಯ್ಯ ನಾಯ್ಕಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಂದೋಲಾ ಗ್ರಾಪಂನಲ್ಲಿ ಒಟ್ಟು 18 ಜನ ಸದಸ್ಯರಿದ್ದು, ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶರಬಯ್ಯ ಮಾತ್ರ ನಾಮಪತ್ರ ಸಲ್ಲಿಸಿದರು. ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಅಂಬವ್ವ ಪೂಜಾರಿ ಘೋಷಿಸಿದರು.

ವಿಜಯೋತ್ಸವ : ಜೆಡಿಎಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಪಂ ಕಚೇರಿ ಎದುರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಜೆಡಿಎಸ್ ಮುಖಂಡರಾದ ಸುಭಾಶಗೌಡ ಇಮ್ಮಣ್ಣಿ, ಸೈಯದ್ ಮುಸ್ತಾಕ್ ಜಮಾದಾರ, ಗೌಡಪ್ಪ ಟಕ್ಕಳಕಿ, ಸುರೇಶ ದೇಸಾಯಿ, ಅರುಣಕುಮಾರ ಅಂಗಡಿ, ವಿಶ್ವನಾಥ ಇಮ್ಮಣ್ಣಿ, ಸಿದ್ದಣ್ಣ ಅಣಬಿ, ಸಿದ್ದು ಸಾಹು ಅಂಗಡಿ, ವೀರಭದ್ರಯ್ಯ ದೊಡ್ಡಮನಿ, ಶರಣಪ್ಪ ಮಡ್ನಾಳ, ಕಲ್ಯಾಣಿ ಜಳಿಂದ್ರ, ಬಸವರಾಜ ವಿಭೂತಿ, ವಿಶ್ವರಾಧ್ಯ ತೆಲಗಬಾಳ, ಗಿರೆಪ್ಪ ದೊರೆ, ಬಸವರಾಜ ಸರಕಾರಮನಿ, ಕರೀಮ್, ಶಿವಕುಮಾರ ಗೋಲಾ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.