ಆಂತರಿಕ ಪರಿಶುದ್ಧತೆಯೊಂದಿಗೆ ಬಾಹ್ಯ ಸೌಂದರ್ಯ ಮುಖ್ಯ: ಡಾ. ಐಹೊಳ್ಳಿ

ವಿಜಯಪುರ, ಜ.26:ಹಿರಿಯರ ಚರ್ಮವು ವಯಸ್ಸಾದಂತೆ ನೀರಿನಾಂಶ ಮತ್ತು ಕೊಬ್ಬು ಕಡಿಮೆಯಾಗಿರುತ್ತದೆ. ತಾವು ರೂಮಿನಲ್ಲಿರುವಾಗ ಶೇ.45 ರಿಂದ 60 ಆದ್ರ್ರತೆ ಇರುವುದು. ಸೂರ್ಯನ ಕಿರಣಗಳಿಂದ ಚರ್ಮ ರಕ್ಷಣೆ, ದಿನಕ್ಕೆ 3-4 ಲೀಟರ್À ನೀರು, ವಾರದಲ್ಲಿ 150 ರಿಂದ 180 ನಿಮಿಷಗಳ ಕಾಲ ದೈಹಿಕ ಚಟುವಟಿಕೆ, ತರಕಾರಿ ಹಣ್ಣು, ಪೂರ್ಣ ಕಾಳುಗಳನ್ನು ಸೇವಿಸುವುದು ಹೀಗೆ ಮುಂತಾದ ಉಪಯುಕ್ತವಾದ ಸಂಗತಿಗಳನ್ನು ಪಾಲಿಸುವದರಿಂದ ದೀರ್ಘಾವಧಿಯವರೆಗೆ ಬದುಕಲು ಸಾಧ್ಯವಾಗುವುದು ಎಂದು ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ತಜ್ಞ ಸಹಾಯಕ ಪ್ರಾಧ್ಯಾಪಕ ಡಾ. ಸನ್ಮಿತ್ರ ವಿ. ಐಹೊಳ್ಳಿಯವರು ಹೇಳಿದರು.

ಚರ್ಮರೋಗ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆ ಕುರಿತು ರೋಟರಿ ಪ್ರೊಬಸ್ ಕ್ಲಬದಲ್ಲಿ ಮಾತನಾಡುತ್ತಾ ಧ್ಯಾನ, ಯೋಗ ಮತ್ತು ಶಾರೀರಿಕ ಚಟುವಟಿಕೆಗಳಿಂದ ಮಾನಸಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುವುದು ಎಂದರು.

ಪ್ರೊಬಸ್ ಕ್ಲಬ್À ಅಧ್ಯಕ್ಷ ವಿಠಲ ತೇಲಿ ಮಾತನಾಡಿ, ಎಲ್ಲರೊಂದಿಗೆ ನಗುನಗುತ್ತಾ ಇರುವುದೇ ಆರೋಗ್ಯಕರ ಜೀವನ ಎಂದರು.

ಸುಮಾರು 55-60 ಜನ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.