
ಭಾಲ್ಕಿ:ಎ.7: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ಸಡಗರ, ಸಂಭ್ರಮದ ಜತೆಗೆ ಭಕ್ತಿಯಿಂದ ಗುರುವಾರ ಆಚರಿಸಲಾಯಿತು. ತಾಲೂಕಿನ ಚಳಕಾಪೂರ ಗ್ರಾಮದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಹನುಮ ದೇವರ ತೊಟ್ಟಿಲು ಕಾರ್ಯಕ್ರಮ, ದಿನವೀಡಿ ದೇವರಿಗೆ ಪೂಜೆ ಪುನಸ್ಕಾರ ಶ್ರದ್ಧೆ, ಭಕ್ತಿಪೂರ್ವಕವಾಗಿ ನೆರವೇರಿದವು. ಸಾವಿರಾರೂ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು.
ಶಾಸಕ ಖಂಡ್ರೆ ವಿಶೇಷ ಪೂಜೆ
ಹನುಮ ಜಯಂತಿ ಹಿನ್ನೆಲೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ಚಳಕಾಪೂರ ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಭೇಟಿ ನೀಡಿದ ಅವರು, ದೇವರಿಗೆ ಕಾಯಿ, ಕರ್ಪೂರ ಅರ್ಪಿಸಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಿಶೋರ ಕುಲಕರ್ಣಿ, ಮಡಿವಾಳಪ್ಪ ಮಂಗಲಗಿ, ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ಸಿದ್ದು ತುಗಶೆಟ್ಟೆ, ವಿಶ್ವನಾಥ ಬಾಯಪ್ಪನೋರ್, ಮಹಾಲಿಂಗಯ್ಯ ಸ್ವಾಮಿ, ಜಗನ್ನಾಥ ಕೋಳಾರೆ, ದೇವೀಂದ್ರ ರುಮ್ಮಾ, ಲವಕುಶ ರೊಟ್ಟೆ ಸೇರಿದಂತೆ ಹಲವರು ಇದ್ದರು.