ಆಂಜನೇಯ ಸ್ವಾಮಿಯ ತೊಟ್ಟಿಲೊತ್ಸವ

ಹರಿಹರ.ಏ.28;  ನಗರದ ರೈಲ್ವೆ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನ ಪರಮ ಭಕ್ತ ವಾಯುಪುತ್ರ ಶ್ರೀ ಹನುಮನ ಜಯಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗಿನ ಜಾವ ಗಣಪತಿ ಪೂಜೆ ನಂತರ ಶ್ರೀ ಹನುಮಾನ ತೊಟ್ಟಿಲು ವಿಶೇಷ ಪೂಜೆಗಳು ಜರುಗಿದವು
ಈ ವೇಳೆ ದೇವಸ್ಥಾನದ ಅರ್ಚಕ ಗುರುಸಿದ್ಧಯ್ಯ ಹಿರೇಮಠ್ ಮಾತನಾಡಿ ಕೋವಿಡ ಮಾರ್ಗ ಸೂಚಿಗಳ ನಿರ್ದೇಶನದಂತೆ ನಾವು ಬೆಳಗಿನ ಜಾವ ವಿಧಿವಿಧಾನಗಳೆಲ್ಲ ಪೂಜೆ ಮಾಡಿದ ನಂತರ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ ದೇವಸ್ಥಾನಕ್ಕೆ ಬರುವಂಥ ಭಕ್ತಾದಿಗಳು ಮನೆಯಲ್ಲೇ ಪೂಜೆ ಪುನಸ್ಕಾರಗಳನ್ನು ಮಾಡಿ ಭಕ್ತಿ ಭಾವದಿಂದ ಮನಸ್ಸಿನಲ್ಲೇ ದೇವರನ್ನು ನೆನೆದು ಮಹಾಮಾರಿ ವೈರಸ್  ಮುಕ್ತ ಮಾಡೋದಕ್ಕೆ ಪ್ರತಿಯಾಬ್ಬರೂ ದೇವರಲ್ಲಿ ಪ್ರಾರ್ಥಿಸೋಣ ಎಂದರು ಸರ್ಕಾರದ ಆದೇಶದಂತೆ 14ದಿನಗಳ ಕಾಲ ಜನತಾ ಕರ್ಫ್ಯೂ  ಇರುವದರಿಂದ ಯಾರು ಮನೆಯಿಂದ ಆಚೆಗೆ ಬರದಂತೆ ಇರಬೇಕು ಅನಾವಶ್ಯಕವಾಗಿ ತಿರುಗಾಡಬೇಡಿ   ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ  ಇಲಾಖೆಗಳೊಂದಿಗೆ ಕೈಜೋಡಿಸೋಣ ಕಣ್ಣಿಗೆ ಕಾಣದ ವೈರಸ್ಸನ್ನ ಮುಕ್ತ ಮಾಡೋದಕ್ಕೆ ಶ್ರೀ ಆಂಜನೇಯ ಸ್ವಾಮಿಯ ಪ್ರಾರ್ಥಿಸೋಣ ಎಂದರು ಶ್ರೀ ಹನುಮಾನ ಜಯಂತಿ ಪ್ರಯುಕ್ತ ಬೆಳಗಿನ ಜಾವ ಗಣಪತಿಪೂಜೆ ಶ್ರೀ ಸ್ವಾಮಿಗೆ ತೊಟ್ಟಿಲು  ಸೇವೆ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆಯನ್ನಮಾಡಿದ  ನಂತರ ಭಕ್ತರಿಗೆ ಪ್ರವೇಶ ನಿಡದಂತೆ ದೇವಸ್ಥಾನಕ್ಕೆ ಬೀಗ ಹಾಕಲಾಯಿತು ಎಂದು ಹೇಳಿದರು