ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಡಲಪೂಜೆ


 ಹಿರಿಯೂರು.ಅ.22;  ನಗರದ ಬಿಇಓ ಕಚೇರಿ ಪಕ್ಕದಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಹೆಬ್ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ   48ನೇ ದಿನದ ಮಂಡಲಪೂಜಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಗಂಗಾಪೂಜೆ ಗಣಪತಿ ಪೂಜೆ ನವಗ್ರಹ ಪೂಜೆ ಪಂಚಬ್ರಹ್ಮ ಕಳಸ ಸ್ಥಾಪನೆ ಮೃತ್ಯುಂಜಯ ಆಂಜನೇಯ ಪವಮಾನ ಕಳಾ ಹೋಮ ಶ್ರೀರಾಮ ಮೂಲ ಮಂತ್ರ ಹೋಮ ಪಂಚಾಮೃತ ಅಭಿಷೇಕ ಆಂಜನೇಯಸ್ವಾಮಿ ಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಮಂಡಲ ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಸಾವಿರಾರು ಜನ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯಿತು  ಈ ಭಾಗದ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು  ಮುಚ್ಚಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳು ನಗರದ ಸಾವಿರಾರು ಜನ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.