ಆಂಜನೇಯಲು ಬಿಗಿ ಪಟ್ಟು ಕಗ್ಗಂಟಾದ ಬಳ್ಳಾರಿ ಟಿಕೆಟ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ಅವರ ಬಿಗಿ‌ ಪಟ್ಟಿನಿಂದಾಗಿ ಇಂದು ಬಿಡುಗಡೆಯಾದ ಕಾಂಗ್ರೆಸ್ ನ 2 ನೇ ಪಟ್ಟಿಯಲ್ಲೂ ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಎಂದು ಕಾಣಿಸುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಳ್ಳಾರಿ ನಗರ ಕ್ಷೇತ್ರದ ಮತ್ತೊಬ್ಬ  ಟಿಕೆಟ್ ಆಕಾಂಕ್ಷಿ ನಾರಾ ಭರತ್ ರೆಡ್ಡಿ ಅವರ ಹೆಸರು ಹೊಸಪೇಟೆಯ ಗವಿಯಪ್ಪ  ಅವರಂತೆ ಮೊದಲ‌ ಪಟ್ಟಿಯಲ್ಲಿಯೇ ಭರತ್ ಹೆಸರೂ ಸಹ ಪ್ರಕಟಗೊಳ್ಳಬೇಕಿತ್ತು.
ಆರಂಭದಲ್ಲಿ ಜಿಲ್ಲೆಯಲ್ಲಿ ಪ್ರಬಲ ಸಮುದಾಯ ಎಂಬ ಕಾರಣಕ್ಕೆ ಲಿಂಗಾಯತರಿಗೆ ಟಿಕೆಟ್ ನೀಡಬಹುದು ಎಂಬ ವಾದದಿಂದ ಅಲ್ಲಂ ಪ್ರಶಾಂತ್  ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ ಅವರು ಚುನಾವಣಾ ವೆಚ್ಚಕ್ಕೆ ಹೆದರಿ ಹಿಂದೆ ಸರಿದರೂ ಎಂದು ಹೇಳಲಾಗುತ್ತದೆ.
ಆಂಜನೇಯಲು ಮತ್ತು ರಾವೂರ್ ಸುನೀಲ್ ಅವರು ನಮಗೆ ಟಿಕೆಟ್ ನೀಡದಿದ್ದರೆ ಪ್ರಶಾಂತ್ ಅವರಿಗೆ ನೀಡಿ ಎಂದಿದ್ದಾರಂತೆ. ಪ್ರಶಾಂತ್ ಹಿಂದೆ ಸರಿದಾಗ ಭರತ್ ರೆಡ್ಡಿ ಅವರ ಟಿಕೆಟ್ ಹಾದಿ ಸುಗಮವಾಗಿತ್ತು.
ಆದರೆ ಆಂಜನೇಯಲು ಅವರು ಪ್ರಶಾಂತ್ ಅವರ ಮನೆತನ ಪಕ್ಷಕ್ಕೆ ನೀಡಿದ ಕೊಡುಗೆ. ಅವರ ಪ್ರಾಮಾಣಿಕತೆ, ಪಕ್ಷ ನಿಷ್ಟೆಯಿಂದ ಹಾಗೆ ಹೇಳಿತ್ತು. ಅವರಿಗೆ ಬೇಡ ಎಂದರೆ.  ಪಕ್ಷದಲ್ಲಿ ಕಳೆದ ಎರಡು ದಶಕಗಳಿಂದ ಕೆಲಸ ಮಾಡಿರುವ ನನಗೆ ನೀಡಿ ಎಂದು. ತಮ್ಮ ರಾಜಕೀಯ ಗುರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಎಐಸಿಸಿಯ ಉನ್ನತ ನಾಯಕರ ಮೂಲಕ ಹೇರಿದ ಒತ್ತಡದಿಂದಾಗಿ ಟಿಕೆಟ್ ಘೋಷಣೆಯಾಗಿದೆ ಕಗ್ಗಂಟಾಗಿದೆಯಂತೆ.
ರಾಜ್ಯ ಉಸ್ತುವಾರಿ ಸುರ್ಜಿವಾಲ ಅವರು ಭರತ್ ರೆಡ್ಡಿ ಅವರು ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ವೇಳೆ ಉತ್ತಮವಾಗಿ ಕೆಲಸ ಮಾಡಿದ್ದಾರೆ.  ಅವರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಹಾಗಾಗಿ ಕಗ್ಗಂಟಾಗಿರುವ ಈ ವಿಷಯದ ಚಂಡು ಈಗ ರಾಹುಲ್ ಮತ್ತು ಖರ್ಗೆ ಅವರ ಅಂಗಳಕ್ಕೆ ಹೋಗಿದೆಯಂತೆ. ಅಂತಿಮ ಪಟ್ಟಿಯಲ್ಲಿಯೇ ಬಳ್ಳಾರಿ ಟಿಕೆಟ್ ಘೋಷಣೆ ಸಾಧ್ಯ ಎನ್ನಾಗುತ್ತದೆ‌. ಟಿಕೆಟ್ ಭರತ್ ಗೋ ಇಲ್ಲವೇ ಆಂಜನೆಯಲುಗೋ ಎಂಬುದನ್ನು ಕಾದು ನೋಡಬೇಕಿದೆ.