ಆಂಜನೇಯನಿಗೆ ೨೦ ಲಕ್ಷ ರೂ. ನಾಮತಿಲಕ ಸಮರ್ಪಣೆ

ಕೆ.ಆರ್.ಪುರ,ಮೇ೪-ದೊಡ್ಡ ಬಾಣಾಸವಾಡಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗ್ರಾಮದ ಮುಖಂಡರಿಂದ ೨೦ ಲಕ್ಷದ ಬೆಲೆಬಾಳು ನಾಮ ತಿಲಕ ಸರ್ಮಪಣೆ ಮಾಡಿದ್ದಾರೆ.

ಸ್ವಾಮಿ ದೇವಸ್ಥಾನಕ್ಕೆ ಗ್ರಾಮದ ಮುಖಂಡರಿಂದ ಸುಮಾರು ೨೨೦ ಗ್ರಾಂ ನ ೨೦ ಲಕ್ಷ ಮೌಲ್ಯದ ಬೆಲೆಬಾಳುವ ಬಂಗಾರದ ನಾಮ ತಿಲಕವನ್ನು ಆಂಜನೇಯ ಸ್ವಾಮಿ ದೇವರಿಗೆ ಕರಗ ಮಹೋತ್ಸವ ದಿನದಂದು ದೇವರಿಗೆ ಸಮರ್ಪಣೆ ಮಾಡಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ
ಬೆಂಗಳೂರು ನಗರ ಜಿಲ್ಲೆಯ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಈ ಕಾಣಿಕೆ ನೀಡಿದ್ದಾರೆ.

ದೊಡ್ಡ ಬಾಣಸವಾಡಿಯ ಗ್ರಾಮಸ್ಥರ ಹಾಗೂ ಭಕ್ತಾದಿಗಳು ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಮತ್ತು ಕರಗ ಮಹೋತ್ಸವ ಅತ್ಯಂತ ವಿಜೃಂಭಣೆಯಾಗಿ ನೆರವೇರಿಸಲಾಗಿದ್ದು ಪೂಜಾ ಮಹೋತ್ಸವದ ಹಿನ್ನೆಲೆಯಲ್ಲಿ ೨೦ಕ್ಕು ಹೆಚ್ಚು ಪಲ್ಲಕ್ಕಿಗಳನ್ನು ಮಾಡಲಾಗಿತ್ತು.

ಸುದ್ದಿಚಿತ್ರ:ಬಾಣಸವಾಡಿಯ ಆಂಜನೇಯ ಸ್ವಾಮಿ
ದೇವಸ್ಥಾನಕ್ಕೆ ಗ್ರಾಮದ ಮುಖಂಡರಿಂದ ಸುಮಾರು ೨೨೦ ಗ್ರಾಂ ನ ೨೦ ಲಕ್ಷ ಮೌಲ್ಯದ ಬೆಲೆಬಾಳುವ ಬಂಗಾರದ ನಾಮ ತಿಲಕ ದೇವರಿಗೆ ಕರಗ ಮಹೋತ್ಸವ ದಿನದಂದು ದೇವರಿಗೆ ಸಮರ್ಪಣೆ ಮಾಡಿದ್ದಾರೆ.