ಆಂಗ್ಲ ಭಾಷಾ ಶಿಕ್ಷಕರಿಗಾಗಿ ಕಾರ್ಯಾಗಾರ

ಕಲಬುರಗಿ,ಜ.3-ಧಾರವಾಡದ ಎನ್.ಪಿ.ಎಸ್ ಸಂಸ್ಥೆ ಮತ್ತು ಹಂಚಿನಮನಿ ಶಿಕ್ಷಣ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ-ಶಿಕ್ಷಕರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರೌಢ ಶಾಲಾ ಆಂಗ್ಲಭಾಷಾ ಶಿಕ್ಷಕರಿಗಾಗಿ ಒಂದು ದಿನದ ಇಂಗ್ಲೀಷ ವಿಷಯದ ಕಾರ್ಯಾಗಾರವನ್ನು ಶಹಾಬಾದ ರಸ್ತೆಯ ನಂದೂರ ಹತ್ತಿರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಕ್ರೇಪ್ಪೆಗೌಡ ಬಿರಾದಾರ ಉದ್ಘಾಟಿಸಿ ಮಾತನಾಡುತ್ತ, 2023 ಮಾರ್ಚನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಯ ಉತ್ತಮ ಸಾಧನೆಯನ್ನು ಮಾಡಿ ಕರ್ನಾಟಕದಲ್ಲಿ ಹತ್ತರಲ್ಲಿ ರ್ಯಾಂಕ್ ಸ್ಥಾನ ಪಡೆದುಕೊಳ್ಳಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಅಷ್ಟೇ ಅಲ್ಲದೆ ಎಲ್ಲಾ ಶಿಕ್ಷಕರು ಈ ಕಾರ್ಯಾದಲ್ಲಿ ತೊಡಗಿಸಿಕೊಂಡು ಫಲಿತಾಂಶ ಸುಧಾರಣೆಗೆ ಸಹಕರಿಸಬೇಕೆಂದು ಕೇಳಿಕೊಂಡರು. ಮುಂಜಾನೆ ಅವಧಿ ತರಗತಿ ಹಾಗೂ ಮಧ್ಯಾಹ್ನದ ಅವಧಿ ತರಗತಿ ಹಾಗೂ ಬಾಗಿಲು ಮುಚ್ಚಿದ ಶಾಲೆ ಈ ರೀತಿಯಾಗಿ ಮಕ್ಕಳಿಗೆ ಬೋಧನೆ ಮಾಡುವುದರೊಂದಿಗೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯಯೆಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ ಅವರು ಮಾತನಾಡುತ್ತ, ಎಲ್ಲಾ ಯೋಜನೆಗಳಿಗೆ ಸಂಘದವತಿಯಿಂದ ಸಂಪೂರ್ಣ ಸಹಕಾರಕೊಡವುದಾಗಿ ಹೇಳಿದರು ಹಾಗೂ ಈ ವರ್ಷದ ಮೊದಲ ಕಾರ್ಯಾಗಾರ ಸೇರಿರುವುದು ಮಕ್ಕಳ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಲೆಂದು ಒತ್ತಿ ಹೇಳಿದರು. ಕಾರ್ಯಾಗಾರದಲ್ಲಿ ಕರ್ನಾಟಕದ ಹೆಸರಾಂತ ಆಂಗ್ಲ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಮುಗಳಿ ಹಾಗೂ ಅಲ್ತಾಫ ಜಹಾಂಗೀರ ಆಂಗ್ಲ ವಿಷಯದ ಕಾರ್ಯಾಗಾರ ನಡೆಸಿಕೊಟ್ಟರು. ಜಿಲ್ಲೆಯ 300ಕ್ಕಿಂತಲೂ ಹೆಚ್ಚು ಶಿಕ್ಷಕರು ಆಂಗ್ಲ ವಿಷಯದ ಕಾರ್ಯಾಗಾರದಲ್ಲಿ ಭಾಗಿಯಾಗಿ ಅದರ ಲಾಭವನ್ನು ಪಡೆದರು. ಕಾರ್ಯಾಗಾರದಲ್ಲಿ ಆಂಗ್ಲ ವಿಷಯದ ಸಂಪನ್ಮೂಲ ವ್ಯಕ್ತಿಗಳು ಕಲಿಕೆಯಲ್ಲಿ ಗ್ರಹಿಕೆ, ಬರೆವುದು ಓದುವುದು ಹಿಂದುಳಿದ ವ್ಯಕ್ತಿಗಳು ಮಕ್ಕಳನ್ನು ಕಲಿಸುವ ತಂತ್ರಗಳನ್ನು ಹೇಳಿದರು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ತ ಸದಸ್ಯರಾದ ಶಶೀಲ್ ಜಿ.ನಮೋಶಿಯವರು ವಹಿಸಿಕೊಂಡಿದ್ದರು. ನಮೋಶಿಯವರು ಆಂಗ್ಲ ವಿಷಯದ ಕಾರ್ಯಾಗಾರದ ಸದುಪಯೋಗಪಡಿಸಿಕೊಂಡು ಪ್ರೌಢ ಶಾಲಾ ಶಿಕ್ಷಕರಿಗೆ ಸಹಕಾರಿಯಾಗಲೆಂದು ಕಿವಿ ಮಾತು ಹೇಳಿದರು. ಬಸವರಾಜ ದ್ಯಾಮಾ ಕಾರ್ಯಾಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತಿಸಿದರು. ಸಂಜುಕುಮಾರ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.