ಅ. 9 ರಂದು ಅನಿರ್ಧಿಷ್ಠ ರಸ್ತೆ ತಡೆಗೆ ನಿರ್ಧಾರ: ಹಳ್ಳಿ

ಶಹಾಬಾದ್:ಅ.7:ತಾಲೂಕ ಕೇಂದ್ರವಾದರು ಇದಕ್ಕೆ ಚುನಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ವಾರಸುದಾರರಿಲ್ಲದಂತಾಗಿದ್ದು, ಹಲವು ಬಾರಿ ನಿರ್ಮಾಣ ಮಾಡಿದರು ಸಂಪೂರ್ಣ ಕೆಟ್ಟು ಹೋದ ಶಹಾಬಾದ್ ಜೇವರ್ಗಿ ರಸ್ತೆ ಪರಿಪೂರ್ಣ ರಸ್ತೆ ನಿರ್ಮಾಣಕ್ಕಾಗಿ ಆಗ್ರಹಿಸಿ ಅ. 9 ರಂದು ವಾಡಿ ಕ್ರಾಸ್‍ನ ರಾಷ್ಟ್ರೀಯ ಹೆದ್ದಾರಿಯನ್ನು ಅನಿರ್ಧಿಷ್ಟಕಾಲವಾಧಿಯವರೆಗೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವದು ಎಂದು ದಸಂಸ.ರಾಜ್ಯ ಸಂ. ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.

ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಪ್ರಗತಿ ಪರಿ ಸಂಘಟನೆಗಳು ಹಾಗೂ ಪ್ರಗತಿಪರರ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ರಸ್ತೆ ತಡೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ನಗರ ವಾಡಿ ಕ್ರಾಸ್‍ದಿಂದ ಮರಗೋಳ ಕ್ರಾಸ್, ಜೇವರ್ಗಿ ಕ್ರಾಸ್ ವತೆಗಿದ 17 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ 3 ವರ್ಷದಿಂದ ಹಲವು ಸಂಘಟನೆಗಳಿಂದ ಹೋರಾಟ ನಡದರು ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಹೇಳಿದರು. ಯಾವುದೆ ರಾಜಕೀಯ ಪಕ್ಷದ ಶಾಸಕರು ಬಂದರು ಶಹಾಬಾದ್ ನಗರ ಹಾಗೂ ತಾಲೂಕ ಬಗ್ಗೆ ನಿರ್ಲಕ್ಷ ಧೋರಣೆ, ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಈ ತಾಲೂಕಿಗೆ ವಾರಸುದಾರರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2 ಬಾರಿ ಟೆಂಡಾರ ಕರೆದು 6 ಕೋ.ರೂ. ಖರ್ಚು ಮಾಡಿದರು, ಸ್ವತ: ಶಾಸಕರು, ಜಿಲ್ಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು ಸಹ ರಸ್ತೆ ಮಾತ್ರ ಅಭಿವೃದ್ದಿ ಕಂಡಿಲ್ಲ, ಸದರಿ ರಸ್ತೆಯಲ್ಲಿ ಪ್ರತಿ ದಿನ ಶಾಲಾ ಮಕ್ಕಳು, ರೈತರು, ವ್ಯಾಪಾರಸ್ಥರು, ರೋಗಿಗಳು ಈ ರಸ್ತೆಯಿಂದ ಓಡಾಡುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅನಾಹುತು ಸಂಭವಿಸುವ ಸಾಧ್ಯತೆ ಇದೆ. ಯಾದಗಿರಿ ಜಿಲ್ಲಾ ಕೇಂದ್ರಕ್ಕಿಂತ ಮುಂಚೆ ನಗರ ಸಭೆ ದರ್ಜೆ ಹೊಂದಿರುವ ಶಹಾಬಾದ್ 1 ಲಕ್ಷ ಜನಸಂಖ್ಯೆ ಹೊಂದಿದೆ, ಆದರು ನಗರದಲ್ಲಿ ಕನಿಷ್ಠ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ, 2 ಬಾರಿ ಶಾಸಕರಾದ ಮತ್ತಿಮಡು ಸೇರಿದಂತೆ ಚುನಾಯಿತ ಎಲ್ಲಾ ಶಾಸಕರು ಈ ಕುರಿತು ನಿರ್ಲಕ್ಷ ವಹಿಸಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಿದರು.

ಸರ್ಕಾರಿ ಕಚೇರಿ ಲಂಚಸ್ಥಾನ.

ನಗರದಲ್ಲಿರುವ ತಹಶೀಲ್ದಾರ ಕಚೇರಿ, ನಗರ ಸಭೆ ಕಚೇರಿ, ಸರ್ಕಾರಿ ಆಸ್ಪತ್ರೆಗಳು ಲಂಚಸ್ಥಾನವಾಗಿದ್ದು, ಸಾರ್ವಜನಿಕರು ಹಣ ನೀಡದೆ ಯಾವುದೇ ಕೆಲಸ ಆಗುವದೆ ಇಲ್ಲ ಎಂದು ಆರೋಪಿಸಿದರು. ನಗರ ಸಭೆಯಲ್ಲಿ ಸಣ್ಣ ಕೆಲಸಕ್ಕೂ ಪರದಾಡಬೇಕಾಗಿದೆ. ನಗರ ಸಭೆ ಚುನಾಯಿತ ಪ್ರತಿನಿಧಿಗಳು ಹಣ ಕೊಟ್ಟರೆ ಮಾತ್ರ ಸಾಮಾನ್ಯ ಸಭೆಗೆ ಹಾಜರಾಗುತ್ತೇವೆ ಎಂದು ರಾಜಾರೋಷವಾಗಿ ಹೇಳುತ್ತಾರೆ, ಖಾತ, ಮೊಟೇಷನ್‍ಗಾಗಿ ಕೇಳಿದಷ್ಟು ಹಣ ನೀಡಬೇಕು, ನಗರದಲ್ಲಿ ನಾಯಿ, ಹಂದಿಗಳ ಕಾಟ ಹೆಚ್ಚಿದ್ದು, ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಕೇಳುವ ಶಕ್ತಿಯೇ ಇಲ್ಲದಂತಾಗಿದೆ. ನಗರ ಸಭೆ ಪೌರಾಯುಕ್ತರು, ಎಇಇ ಅವರನ್ನು ಭಷ್ಟಾಚಾರದ ಆರೋಪದ ಮೇಲೆ ಹಿಂದೇ ವರ್ಗಾವಣೆ ಮಾಡಲಾಗಿತ್ತು, ಈ ಸರ್ಕಾರ ಅಂತಹವರನ್ನೇ ಮತ್ತೆ ನಿಯೋಜನೆಗೊಳಿಸಿರುವದು ಸರ್ಕಾರದ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದು ದೂರಿದರು.

ತಹಶೀಲ್ದಾರ ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರಕ್ಕೆ 100-200 ನೀಡಿದರೆ ಮಾತ್ರ ಸಿಗುತ್ತದೆ. ಹಣ ನೀಡದೆ ಇದ್ದಲ್ಲಿ ಅರ್ಜಿ ತಿರಸ್ಕøತವಾಗುತ್ತವೆ. ಇದೇ ಪರಿಸ್ಥಿತಿ ಪಹಣಿ ಇತರ ಕೆಲಸಕ್ಕೆ ತಿಂಗಳು ಗಟ್ಟಲೆ ಅಲೆಯಬೇಕು. ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ 5-6 ಜನ ವೈದ್ಯರಿದ್ದರು. ರಾತ್ರಿ ಹೊತ್ತು ಒಬ್ಬ ವೈದ್ಯರು ಇರುವದಿಲ್ಲ ಎಂದು ಹೇಳಿದರು. ಸುಮಾರು ಒಂದು ಲಕ್ಷ ಜನ ಸಂಖ್ಯೆ ಹೊಂದಿರುವ ನಗರದ ಜನತೆ ಜನಪ್ರತಿನಿಧಿಗಳ, ಸರ್ಕಾರದ ವಿರುದ್ದ ತಿರುಗಿ ಬಿದ್ದರೆ, ಇಲ್ಲಿ ಒಬ್ಬ ಅಧಿಕಾರಿ ಕೆಲಸ ಮಾಡುವದಾಗುವದಿಲ್ಲ, ಜನಪ್ರತಿನಿಧಿಗಳು ಇತ್ತ ಬಾರದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಹಾಬಾದ ತಾಲೂಕಿನ ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿ ಮಾಡಲು ಕರೆ ನೀಡಿದರು.

ಅ.9 ರಂದು ನಡೆಯಲಿರುವ ಅನಿರ್ಧಿಷ್ಠ ರಾಷ್ಟ್ರೀಯ ಹೆದ್ದಾರಿ ತಡೆಗೆ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಎಇಇ ಸ್ಥಳಕ್ಕೆ ಬರುವವರೆಗಗೂ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು. ಪ್ರತಿಭಟನೆಯಲ್ಲಿ 5 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಗನ್ನಾಥ ಎಸ್.ಎಚ್, ರಾಘವೇಂದ್ರ ಎಂ.ಜಿ. ಪೂಜಪ್ಪೆ ಮೇತ್ರೆ .ವಿಶ್ವರಾಜ ಫಿರೋಜಾಬಾದ್, ಮಲ್ಲಣ್ಣ ಮಸ್ಕಿ, ಗಣಪತರಾವ ಮಾನೆ, ಕಿರಣ, ಯಲ್ಲಾಲಿಂಗ, ಬಾಕ್ರೋದ್ದಿನ್ ಸೇಠ, ನಾಗಣ್ಣಾ ರಾಂಪೂರೆ, ಸೇರಿಂತೆ ಇತರರು ಇದ್ದರು. ಜಗನ್ನಾಥ ಎಸ್.ಎಚ್. ಸ್ವಾಗತಿಸಿದರು.