ಅ.8 ಇಂಡಿಯಲ್ಲಿ ಮಠಾಧೀಶರಿಂದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಇಂಡಿ: ಜು.24:ರಾಜ್ಯದಲ್ಲಿ ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಇಂಡಿ ಪಟ್ಟಣದಲ್ಲಿ ಅ. 8 ರಂದು ಮಠಾಧೀಶರ ಸಭೆ ನಡೆಸಿ ಪಾದಯಾತ್ರೆ ಹಮ್ಮಿಕೊಂಡು ಪ್ರತಿಭಟಿಸಲಾಗುವದೆಂದು ತಡವಲಗಾದ ರಾಚೋಟೆಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ವಿರಕ್ತ ಮಠದಲ್ಲಿ ಮಠಾಧೀಶರು ಹಮ್ಮಿಕೊಂಡ ಚಿಂತನ ಸಭೆಯಲ್ಲಿ ಮಾತನಾಡಿದರು..
ಇಂಡಿ ತಾಲೂಕಿನ ಚಿಂತನ ಕ್ರೀಯಾಶೀಲ ಮಠಾಧೀಶರು ಅ.8ರಂದು ಇಂಡಿ ಪಟ್ಟಣದಲ್ಲಿ ಬೆಳಿಗ್ಗೆ 10ಕ್ಕೆ ಕೂಡಿಕೊಂಡು ಬಸವೇಶ್ವರ ವೃತ್ತದಿಂದ ಪಾದಯಾತ್ರೆ ನಡೆಸಿ ಬೇಡ ಜಂಗಮರ ಮೀಸಲಾತಿ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ತಾಲೂಕಿನ ಮಠಾಧೀಶರು ಸಮಸ್ತ ಜಂಗಮರನ್ನು ಒಳಗೊಂಡು ತಹಸಿಲ್ದಾರ ಕಚೇರಿಗೆ ತೆರಳಿ ಹಕ್ಕೋತ್ತಾಯ ಮಾಡಲು ಸಭೆಯಲ್ಲಿ ನಿರ್ಣಯಸಲಾಯಿತು ಎಂದರು.
ಸಭೆಯಲ್ಲಿ ಬಂಥನಾಳದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳು, ಅಥರ್ಗಾದ ಮುರಘೇಂದ್ರ ಸ್ವಾಮಿಗಳು, ಹತ್ತಳಿ ಗುರುಪಾದೇಶ್ವರ ಶಿವಾಚಾರ್ಯರು, ಚಡಚಾಣದ ಮಲ್ಲಿಕಾರ್ಜುನ ಸ್ವಾಮಿಗಳು, ಅಗರಖೇಡದ ಪ್ರಭುಲಿಂಗ ಸ್ವಾಮಿಗಳು, ಇಂಚಗೇರಿಯ ರುದ್ರಮಿನಿ ದೇವರು, ರೋಡಗಿಯ ಶಿವಲಿಂಗ ಸ್ವಾಮಿಗಳು ಸೇರಿದಂತೆ ತಾಲೂಕಿನ ವಿವಿಧ ಮಠದ ಶ್ರೀಗಳು ಉಪಸ್ಥಿತರಿದ್ದರು.