ಅ.7ರಿಂದ ಪಲಿಮಾರು ಶ್ರೀಗಳ ಪ್ರವಚನ

ಕಲಬುರಗಿ ಸೆ 26: ಉಡುಪಿ ಪಲಿಮಾರುಮಠದ ಪರಮ ಪೂಜ್ಯ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಅಕ್ಟೋಬರ್ 6 ರಂದು ಸಾಯಂಕಾಲ ಕಲಬುರಗಿ ಮಹಾನಗರಕ್ಕೆ ಆಗಮಿಸುತ್ತಿದ್ದಾರೆ. ಅ. 7 ರಿಂದ 11 ರ ವರೆಗೆ ಪ್ರತಿದಿನ ಸಾಯಂಕಾಲ 6.30ರಿಂದ 8 ಗಂಟೆವರೆಗೆ ಹೊಸ ಜೇವರಗಿ ರಸ್ತೆಯ ಶ್ರೀರಾಮಮಂದಿರದಲ್ಲಿ ಶ್ರೀಗಳಿಂದ ಪ್ರವಚನ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗಾಗಿ ಕಿಶೋರ ದೇಶಪಾಂಡೆ- 9449731728,ವ್ಯಾಸರಾಜ ಸಂತೆಕೆಲ್ಲೂರ -9449644366ಅವರನ್ನು ಸಂಪರ್ಕಿಸಲು ವ್ಯವಸ್ಥಾಪಕರು ಕೋರಿದ್ದಾರೆ.