ಅ. 4-5 ಎರಡು ದಿನ ನೀರು ಸರಬರಾಜು ಸ್ಥಗಿತ

ವಾಡಿ:ಆ.3: ಪಟ್ಟಣದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕುಂದನೂರು ಗ್ರಾಮದ ಹತ್ತಿರವಿರುವ ಶುದ್ಧಿಕರಣ ಘಟಕದ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿರುವುದ್ದರಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಧಿಕಾರಿ ವಿಠ್ಠಲ ಹಾದಿಮನಿ ತಿಳಿಸಿದ್ದಾರೆ.

ಮುಖ್ಯ ಪೈಪ್‍ಲೈನ ಮತ್ತು ವಾಲ್ ಹಾಳಾಗಿರುವ ಪ್ರಯುಕ್ತ ಅದನ್ನು ತೆಗೆದು ಹೊಸ ಕಾಮಗಾರಿ ನಡೆಸಲಾಗುತ್ತಿದೆ. 350 ಎಮ್‍ಎಮ್. ಸುತ್ತಳತೆಯ ಪೈಪ್‍ಗಳು ಅಳವಡಿಸಲಾಗುತ್ತಿದ್ದ, ಪ್ರಯುಕ್ತ ಅಗಷ್ಟ್ 4-5 ಎರಡು ದಿನಗಳ ಕಾಲ ವಾಡಿ ಪಟ್ಟಣದ ಎಲ್ಲಾ ಬಡಾವಣೆ, ವಾರ್ಡ್‍ಗಳಿಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಪಟ್ಟಣದ ಸಾರ್ವಜನಿಕರು ಸಹಕರಿಸಬೇಕು, ನೀರನ್ನು ಹಿತಮಿತವಾಗಿ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.