ಅ.31 ರಿಂದ ಬಾದಾಮಿಯ ರಾಯರ ಮಠದಲ್ಲಿರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

(ಸಂಜೆವಾಣಿ ವಾರ್ತೆ)
ಬಾದಾಮಿ,ಆ26: ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352 ನೇ ಆರಾಧನಾ ಮಹೋತ್ಸವವು ಅ.31 ರಿಂದ ಸೆ.2 ರವರೆಗೆ ಮೂರು ದಿನಗಳ ಕಾಲ ಜರುಗಲಿದೆ.
31 ರಂದು ಪೂರ್ವರಾಧನೆ ಬೆಳಿಗ್ಗೆ 9 ಗಂಟೆಗೆ ಪಾಲಕಿ ಉತ್ಸವ, ಗ್ರಾಮ ಪ್ರದಕ್ಷಣೆ, ಸೆ.1 ರಂದು ಮಧ್ಯಾರಾಧನೆ ನಿಮಿತ್ಯ ವಿಶೇಷ ಅಲಂಕಾರÀ ಪೂಜೆ, ಸೆ.2 ಉತ್ತರಾರಾಧನೆಯಂದು ಬೆಳಿಗ್ಗೆ 9.30 ಕ್ಕೆ ಮಹಾರಥೋತ್ಸವ ಹಾಗೂ ಸ್ವಸ್ತಿವಾಚನಾದಿಗಳು ನಡೆಯಲಿವೆ.
ನಿತ್ಯ ಶ್ರೀರಾಯರಿಗೆ ವಿಶೇಷ ಪೂಜೆ, ಪ್ರಸಾದ ಹಾಗೂ ಅನ್ನ ಪ್ರಸಾದ ವಿತರಣೆ, ಸೆ.3 ರಂದು ಸತ್ಯನಾರಾಯಣ ಪೂಜೆ ಹಾಗೂ ಪವಮಾನ ಹೋಮ ನಡೆಯಲಿದ್ದು, ಸೆ.24 ರಿಂದ 27 ರವರೆಗೆ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನಾ ಮಹೋತ್ಸವ ನಡೆಯಲಿದೆ.
ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ರಾಘವೇಂದ್ರಸ್ವಾಮಿ ಮಿಶನ್ ಅಧ್ಯಕ್ಷ ಕೆ.ವ್ಹಿ.ಕೆರೂರ, ಕಾರ್ಯದರ್ಶಿ ಅಡಿವೇಂದ್ರ ಇನಾಮದಾರ ಹಾಗೂ ಖಜಾಂಚಿ ಪ್ರಕಾಶ ಕುಲಕರ್ಣಿ ಜಂಟಿಯಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.