ಅ.29ರಂದು “ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ19. ಇದೆ ಅಕ್ಟೋಬರ್ 29 ರಂದು ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆ ನಗರದಲ್ಲಿ ಪರಿಶಿಷ್ಟಜಾತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷರಾದ ಸೋಮಶೇಖರ ಬಣ್ಣದಮನೆ ತಿಳಿಸಿದರು. ಅ.17 ರಂದು ಸಿರುಗುಪ್ಪ ತಾಲೂಕು ಛಲವಾದಿ ಮಹಾಸಭಾ ಮುಖಂಡರನ್ನು ಭೇಟಿಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿ, ಪರಿಶಿಷ್ಟಜಾತಿಯ ಛಲವಾದಿ, ಮಾದಿಗ, ಬೋವಿ, ಕೊರಚ-ಕೊರಮ, ಲಂಬಾಣಿ ಜನಾಂಗದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ 70% ಕ್ಕೂ ಅಧಿಕ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಕರೆತರಬೇಕೆಂದು ತಿಳಿಸಿ, ಎಸ್‍ಸಿ ಸಮುದಾಯದಲ್ಲಿ ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿರುಗುಪ್ಪ ತಾಲೂಕು ಛ.ಮ.ಸ.ಅಧ್ಯಕ್ಷ ಬಿ.ಸಣ್ಣರಾಮಯ್ಯ, ಯುವಸಮಿತಿ ಅಧ್ಯಕ್ಷ ಎಚ್.ಗಣೇಶ್ ಮಾತನಾಡಿ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು ಪರಿಶಿಷ್ಟಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುತ್ತೇವೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ವಿಜಯನಗರ ಜಿಲ್ಲಾ ಛ.ಮ.ಸ. ಮುಖಂಡರಾದ ಸಣ್ಣಈರಪ್ಪ ಮತ್ತು ಶಿವಕುಮಾರ ಮಾತನಾಡಿ ಸಿರುಗುಪ್ಪ ತಾಲೂಕಿನ ಸಂಘಟನೆಯ ಶಿಸ್ತು ಮತ್ತು ಕಾರ್ಯವಿಧಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇವೇಳೆ ಸೋಮಶೇಕರ್, ಸಣ್ಣಈರಪ್ಪ, ಶಿವಕುಮಾರ, ಹನುಮಂತಪ್ಪ ಇವರನ್ನು ತಾಲೂಕು ಛ.ಮ.ಸಭಾ ಮುಖಂಡರು ಸನ್ಮಾನಿಸಿ ಗೌರವಿಸಿದರು. ತಾಲೂಕು ಸಮಿತಿಯ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

One attachment • Scanned by Gmail