ಅ.26ಕ್ಕೆ ಕೆಂಭಾವಿ ಪಟ್ಟಣಕ್ಕೆ ರಂಭಾಪುರಿ ಜಗದ್ಗುರುಗಳು

ಕೆಂಭಾವಿ:ಅ.24:ಪಟ್ಟಣದ ಹೀರೆಮಠ ಸಂಸ್ಥಾನದಲ್ಲಿ ಆದಿ ಶಕ್ತಿ ಜಗನ್ಮಾತೆ ಶ್ರೀದೇವಿ ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾನಪನೆ ಮತ್ತು ದೇವಾಲಯದ ಉದ್ಘಾಟನೆ ಕಳಸಾರೋಹಣ .ಹಾಗು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾರೋಟ ಮೆರವಣಿಗೆ ಕಾರ್ಯಕ್ರಮ ನೂತನ ಶ್ರೀ ಮಠದ ಶಿಲಾಮಂಟಪದ ಶಂಕುಸ್ಥಾಪನೆ ,ಅಯ್ಯಚಾರ ಶಿವದೀಕ್ಷೆ ಹಾಗೂ ಧಾರ್ಮಿಕ ಸಭೆ ಯನ್ನು ಹಮ್ಮಿಕೊಳ್ಳಲಾಗಿದೆ ,25ರಂದು ಹೋಮ ಹವನ ಧಾರ್ಮಿಕ ಪೂಜಾ ಕೈಕಂರ್ಯಗಳು ನಡೆಯಲಿದ್ದು 26ರಂದು ಜಂಗಮ ವಟುಗಳಿಗೆ ಅಯ್ಯಚಾರ ಶಿವದೀಕ್ಷೆ ಮತ್ತು ಶ್ರೀಮದ ರಂಭಾಪುರಿ ಜಗದ್ಗುರುಗಳು ಪೂರ್ಣಕುಂಭ ಸ್ವಾಗತದೊಂದಿಗೆ ಪುರಪ್ರವೇಶ ಮಾಡುವರು ಭೋಗೇಶ್ವರ ದೇವಸ್ಥಾನದಿಂದ ಮುಖ್ಯಬಜಾರ ಮೂಲಕ ಶ್ರೀಮಠದವರೆಗೆ
ಸಾರೋಟನಲ್ಲಿ ಮೆರವಣಿಗೆ ನೇರವರಲಿದೆ ಎಂದು ಹೀರೆಮಠದ ಪೂಜ್ಯರಾದ ಷ.ಬ್ರ. ಚನ್ನಬಸವ ಶಿವಾಚಾರ್ಯರು ಹೇಳಿದರು,
ಜಗದ್ಗುರುಗಳ ಅಮೃತ ಹಸ್ತದಿಂದ ಮೂರ್ತಿಪ್ರತಿಷ್ಠಾಪನೆ ದೇವಸ್ಥಾನದ ಉದ್ಘಾಟನೆ ಕಳಸಾರೋಹಣ ನೇರವೆರುವುದು ನಂತರ ನಾಡಿನ ವಿವಿಧ ಮಠಾಧೀಶರು,ಸಚಿವರು ರಾಜಕೀಯ ಮುಖಂಡರಗಳು ಭಾಗವಹಿಸುವರು ಎಂದು ತಿಳಿಸಿದರು