ಅ 24 ವಿಶ್ವ ಸಂಸ್ಥೆ ದಿನ

ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು.  ಅದರ ನೆನೆಪಿಗಾಗಿ  ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಸಂಯುಕ್ತ ರಾಷ್ಟ್ರ ಸಂಸ್ಥೆ (ಅಥವಾ ವಿಶ್ವಸಂಸ್ಥೆ) ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಎರಡನೆ ವಿಶ್ವ ಯುದ್ಧದ ನಂತರ ಯುದ್ಧ ವಿಜಯಿ ದೇಶಗಳಾದ ಫ್ರಾನ್ಸ್, ಯು.ಎಸ್.ಎ., ಚೀನಾ, ಸೋವಿಯಟ್ ಸಂಸ್ಥಾನ ಮತ್ತು ಯು.ಕೆ. ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, ಜೂನ್ ೨೬, ೧೯೪೫ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.

ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಅಧಿಕೃತವಾಗಿ ಸ್ಥಾಪಿತವಾಯಿತು. ಒಂದನೆಯ ಮಹಾಯುದ್ಧದ ಅನಂತರ ಸ್ಥಾಪಿಸ ಲಾಗಿದ್ದ ಲೀಗ್ ಆಫ್ ನೇಷನ್ಸ್‍ನ(ರಾಷ್ಟ್ರ ಸಂಘ) ವಿಫಲತೆ ಹಾಗೂ ಎರಡನೆಯ ಮಹಾಯುದ್ಧದ ಘೋರ ಪರಿಣಾಮಗಳನ್ನರಿತು ಮುಂದೆ ಯುದ್ಧಗಳಾಗುವುದನ್ನು ತಡೆಯಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವಜನಾಂಗದ ಜೀವನಮಟ್ಟ ಸುಧಾರಿಸುವ ಧ್ಯೇಯದೊಂದಿಗೆ ಇದನ್ನು ಸ್ಥಾಪಿಸಲಾಯಿತು. ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಹಾಗೂ ರಷ್ಯದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು. ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ವಿಶಾಲ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್‍ನಲ್ಲಿ ನೀಡಿದಾಗ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸ ಲಾಯಿತು(1951). ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ ಇದರ ಅಧಿಕೃತ ಭಾಷೆಗಳು. ಪ್ರಸ್ತುತ ವಿಶ್ವಸಂಸ್ತೆಯಲ್ಲಿ 193 (2011) ಸದಸ್ಯ ರಾಷ್ಟ್ರಗಳಿವೆ.

ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಸಮಾನತೆ, ಸೌಹಾರ್ದತೆ; ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರತತ್ತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವ ಧ್ಯೇಯೋದ್ದೇಶ ಗಳನ್ನು ಹೊಂದಿದೆ. ಎಲ್ಲ ಜನಾಂಗಗಳ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಾರ್ವಭೌಮತ್ವದ ಆಧಾರದ ಮೇಲೆ ತನ್ನ ಸದಸ್ಯ ರಾಷ್ಟ್ರಗಳ ಹಲವು ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ಇದು ತನ್ನ ಬಹುಮುಖ್ಯ ಕಾರ್ಯಗಳನ್ನು ನಿರ್ವಹಿಸಲು ಆರು ಪ್ರಧಾನ ಸಮಿತಿ ಹಾಗೂ ಉಪಸಮಿತಿಗಳನ್ನು ಹೊಂದಿದೆ. ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು ಎಂದರೆ ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್ ಇಂಗ್ಲೇಂಡ್ ನ ಚರ್ಚಿಲ್, ರಷ್ಯಾದ ಜೋಸೆಪ್ ಸ್ಟಾಲಿನ್

ವಿಶ್ವಸಂಸ್ಥೆಯ ಧ್ವಜ:
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು
*ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್
* ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್

ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು
* ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ* ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ, ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ, ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ, ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ,ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ, ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ

* ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್
* ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು
* ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್
* ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಕೊರೊನಾ
* ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ
* ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ
* ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ
* ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ
* ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ
* ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ

ವಿಶ್ವ ಅಭಿವೃದ್ಧಿ ದಿನಾಚರಣೆ
ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿಯು ಯುನೈಟೆಡ್‌ ನೇಷನ್ಸ್‌ ಡೇಯಂದೇ ಅಂದರೆ ಅಕ್ಟೋಬರ್‌ 24ರಂದು ವಿಶ್ವ ಅಭಿವೃದ್ಧಿ ದಿನಾಚರಣೆಯನ್ನು ಕೂಡ ಆಚರಿಸಬೇಕು ಎಂದು 1972ರಲ್ಲಿ ನಿರ್ಧರಿಸಿತು. ಪ್ರತಿ ವರ್ಷ ಸಮಸ್ಯೆಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನ ಸೆಳೆಯುವ ಉದ್ದೇಶ ಕೂಡ ಜನರಲ್‌ ಅಸ್ಲೆಂಬಿಯದಾಗಿತ್ತು. ಅವುಗಳನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವುದು ಕೂಡ ಅಗತ್ಯವಾಗಿತ್ತು.

1972, ಮೇ 17 ರಂದು ನಡೆದ ವ್ಯಾಪಾರ ಮತ್ತು ಅಭಿವೃದ್ಧಿಯ ಕುರಿತಾದ ಯುಎನ್‌ ಸಮ್ಮೇಳನದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಅಭಿಪ್ರಾಯಗಳನ್ನು ಒಟ್ಟುಗೂಡಿಸಲಾಯಿತು. ಪ್ರಪಂಚದಲ್ಲಿ ಸಮಸ್ಯೆಗಳು ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಜನರ ಗಮನವನ್ನು ಸೆಳೆಯುವುದಕ್ಕಾಗಿ ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನು ಪರಿಚಯಿಸಲು ನಿರ್ಧರಿಸಲಾಯಿತು. ಈ ಸಮಸ್ಯೆಗಳನ್ನು ಬಗೆಹರಿಸಲು ದಾರಿಗಳನ್ನು ಕಂಡುಕೊಳ್ಳುವುದಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವುದು ಕೂಡ ಇದರ ಉದ್ದೇಶವಾಗಿತ್ತು. ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನು ಅಕ್ಟೋಬರ್‌ 24, 1973ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು. ಆದಾದ ಬಳಿಕ ಪ್ರತಿ ವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.