ಅ. 21 ರಿಂದ ಹಾಯಿದೋಣಿ ಜಲಕ್ರೀಡಾ ಶಿಬಿರ

ಗದಗ, ಅ18: ಯುವಕ ಯುವತಿಯರಲ್ಲಿ ಕ್ರೀಡಾ ಅಭಿರುಚಿಯನ್ನು ಅಭಿವ್ಯಕ್ತಿಪಡಿಸಲು ಇದೇ ಅಕ್ಟೋಬರ್ 21 ರಿಂದ ನವೆಂಬರ್ 5 ರವರೆಗೆ ಭೀಷ್ಮ ಕೆರೆಯಲ್ಲಿ ಹಾಯಿದೋಣಿ ಜಲಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಸ್ಪೋಟ್ರ್ಸ ಅಸೋಸಿಯೇಶನ್ ಸೇರಿದಂತೆ ಇತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾಯಿದೋಣಿ ಜಲಕ್ರೀಡಾ ತರಬೇತಿ ಶಿಬಿರವನ್ನು ಜಿಲ್ಲೆಯ ಉತ್ಸಾಹಿ ಯುವ ಜನತೆಗೆ ಏರ್ಪಡಿಸಲಾಗಿದೆ.
ತರಬೇತಿಯು ಐದು ದಿನಗಳ ಅವಧಿಯದ್ದಾಗಿದ್ದು, ಮೊದಲನೇ ಬ್ಯಾಚ್ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಎರಡನೇ ಬ್ಯಾಚ್ ಮಧ್ಯಾಹ್ನ 2.30 ರಿಂದ ಸಂಜೆ 6.30 ರವರೆಗೆ ಏರ್ಪಡಿಸಲಾಗುವದು. 7 ವರ್ಷ ಮೇಲ್ಪಟ್ಟ ಮಕ್ಕಳು, ವಯಸ್ಕರರು ತರಬೇತಿಯನ್ನು ನುರಿತ ತರಬೇತುದಾರರಿದಂ 5 ದಿನಗಳ ನೀಡಲಾಗುವದು. ನೋಂದಣಿ ಶುಲ್ಕ ಐದು ಸಾವಿರ ರೂ. ಗಳನ್ನು ನಿಗದಿಪಡಿಸಲಾಗಿದೆ. ಆಸಕ್ತರು ತರಬೇತಿಗೆ ಹೆಸರು ಮೊದಲೇ ನೊಂದಾಯಿಸಬೇಕು. ಹೆಸರು ನೊಂದಾಯಿಸಲು ದೀಪಕ ಮೊ.ಸಂ.9886472416, ಪುಟ್ಟರಾಜ ಮೊ.ಸಂ. 9060505993, ಸುರೇಶ ಮೊ.ಸಂ. 9060703554 ಇವರನ್ನು ಸಂಪರ್ಕಿಸಬಹುದಾಗಿದೆ. ಮೊದಲು ಹೆಸರು ನೊಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಉದ್ಘಾಟನೆ: ಭೀಷ್ಮಕೆರೆ ಆವರಣದಲ್ಲಿ ಅಕ್ಟೋಬರ್ 21 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾಯಿದೋಣಿ ಜಲಕ್ರೀಡಾ ತರಬೇತಿ ಶಿಬಿರಕ್ಕೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯರುಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ನರಗುಂದ ಶಾಸಕರಾದ ಸಿ.ಸಿ.ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಆಗಮಿಸುವರು.
ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ವಿóಶೇಷ ಆಹ್ವಾನಿತರಾಗಿ ಆಗಮಿಸುವರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ ವಿಭೂತಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.