ಅ.15ರಂದು ಶ್ರೀ ಬನಶಂಕರಿದೇವಿಗೆ ರಜತ ಪ್ರಭಾವಳಿ ಸಮರ್ಪಣೆ


ಗುಳೇದಗುಡ್ಡ ಅ.13- ಕಂಠಿಪೇಟೆ ದೇವಾಂಗ ಸಮಾಜ ಅಭಿವೃದ್ಧಿ ಸಮಿತಿ ಹಾಗೂ ದಸರಾ ಮಹೋತ್ಸವ ಸಮಿತಿ ಗುಳೇದಗುಡ್ಡ ಇವರ ಸಹಯೋಗದಲ್ಲಿ ದಸರಾ ಹಬ್ಬದ ಅಂಗವಾಗಿ ಇದೇ ಅ.15ರವಿವಾರದಂದು ಕಂಠಿಪೇಟೆಯ ಶ್ರೀ ಬನಶಂಕರಿದೇವಿಗೆ ರಜತ ಪ್ರಭಾವಳಿ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ ಎಂದು ಕಂಠಿಪೇಟೆ ದೇವಾಂಗ ಸಮಾಜದ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಮುಖಂಡ ವಿಷ್ಣು ಬಳಿಗೇರಿ ಹೇಳಿದರು.
ಪಟ್ಟಣದ ಕಂಠಿಪೇಟೆ ಶ್ರೀ ಕಾಳಿಕಾದೇವಿ ಸಮುದಾಯ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಅ.15 ರವಿವಾರದಂದು ಬೆಳಿಗ್ಗೆ 6-00ಘÀಂಟೆಗೆ ಶ್ರೀ ಬನಶಂಕರಿದೇವಿಗೆ ಮಹಾಭಿಷೇಕ ಹಾಗೂ ಘಟಸ್ಥಾಪನೆ ನಂತರ 9-00ಘಂಟೆಗೆ ಕುಂಭ ಹೊತ್ತ ಮಹಿಳೆಯರಿಂದ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ರಾಯಬಾಗ ತಾಲ್ಲೂಕಿನ ಅಲಕನೂರ ಗ್ರಾಮದ ಕರಿಸಿದೇಶ್ವರ ಮಠದ ಆನೆಯ ಮೇಲೆ ರಜತ ಪ್ರಭಾವಳಿ ಹೊತ್ತ ಬೃಹತ್ ಮೆರವಣಿಗೆಯು ಕಂಠಿಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ನಂತರ ಕಂಠಿಪೇಟೆ ಬನಶಂಕರಿ ದೇವಸ್ಥಾನಕ್ಕೆ ಬಂದು ತಲುಪಲಿದೆ, ನಂತರ ಶ್ರೀ ಬನಶಂಕರಿ ದೇವಿಗೆ ರಜತ ಪ್ರಭಾವಳಿ ಸಮರ್ಪಿಸುವುದು.
ಶ್ರೀ ವೇದಮೂರ್ತಿ ರಾಘವೇಂದ್ರ ಸ್ವಾಮಿಗಳು ದೇವಾಂಗಮಠ, ಗುಳೇದಗುಡ್ಡ ಹಾಗೂ ಶ್ರೀ 1008 ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಗುರುಸಿದ್ದೇಶ್ವರ ಬೃಹನ್ಮಠ, ಗುಳೇದಗುಡ್ಡ ಇವರುಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಕಾರ್ಯಕ್ರಮದ ಅಂಗವಾಗಿ ಪ್ರನಿತಿತ್ಯ ಸಂಜೆ 7-00ಘÀಂಟೆಗೆ ದೇವಿ ಪಾರಾಯಣ ನಡೆಯಲಿದ್ದು, ರಂಗಪ್ಪ ಶೇಬಿನಕಟ್ಟಿ, ಸಂಕಣ್ಣ ಕಂಠಿ, ರವಿ ಶೇಬಿನಕಟ್ಟಿ ಅವರು ಶ್ರೀದೇವಿಯ ಪುರಾಣ ಪ್ರವಚನ ಮಾಡಲಿದ್ದಾರೆ. ಪ್ರತಿದಿನ ಸಂಜೆ 6-00ಘಂಟೆಗೆ ಶ್ರೀ ಅಷ್ಟಲಕ್ಷ್ಮೀದೇವಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಜರುಗುವುದು.
ಅ.23ರ ಸೋಮವಾರದಂದು ಬೆಳಿಗ್ಗೆ ನವಚಂಡಿ ಹೋಮ ಹವನ, ಪುರಾಣ ಮಂಗಲ ಹಾಗೂ ಮಧ್ಯಾಹ್ನ 1-00ಘಂಟೆಗೆ ಮಹಾಪ್ರಸಾದ, ನಂತರ ಸಂಜೆ 6-00ಘಂಟೆಗೆ ಸಮಾರೋಪ ಸಮಾರಂಭ ನಡೆಯುವುದು, ಸಮಾರಂಭದಲ್ಲಿ ದಾನಿಳುಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಶ್ರೀ 1008 ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.
ಪತ್ರಿಕಾಗೋಷ್ಠಿಯಲ್ಲಿ ಕಂಠಿಪೇಟೆ ದೇವಾಂಗ ಸಮಾಜದ ಅಧ್ಯಕ್ಷ ತುಕಾರಾಮ ಬಳಿಗೇರಿ, ಮುಖಂಡ ಕೃಷ್ಣಪ್ಪ ಶೇಬಿನಕಟ್ಟಿ, ಸಂಕಣ್ಣ ಕಂಠಿ, ಲುಮ್ಮಣ್ಣ ಶೇಬಿನಕಟ್ಟಿ, ಲೇಶಪ್ಪ ಶೇಬಿನಕಟ್ಟಿ, ಶ್ರೀನಿವಾಸ ನಾಗರಾಳ, ಮಹೇಶ ಶೇಬಿನಕಟ್ಟಿ ಮತ್ತಿತರರಿದ್ದರು.