ಅ. 15ಕ್ಕೆ ಕೋಟೆ ಆಕರ್ಷಿಸುವಂತೆ ವಿಶೇಷ ಅಲಂಕಾರ

ಬಸವಕಲ್ಯಾಣ: ಜು.24:ನಗರದ ಐತಿಹಾಸಿಕ ಕೋಟೆಯ ಸ್ವಚ್ಚತಾ ಅಭಿಯಾನವು ಭಾನುವಾರ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕೋಟೆಯ ಎರಡನೇ ಸುತ್ತಿನ ಸ್ವಚ್ಚತಾ ಅಭಿಯಾನ ಭಾನುವಾರ ಜರುಗಿತು. ಬೆಳಿಗ್ಗೆ 7ಕ್ಕೆ ಆರಂಭಗೊಂಡ ಸ್ವಚ್ಛತಾ ಅಭಿಯಾನವು 11-30ರ ವರೆಗೆ ನಡೆಯಿತು.

ಕೋಟೆಯ ಸ್ವಚ್ಚತಾ ಅಭಿಯಾನದ ಅಂಗವಾಗಿ ಭಾನುವಾರ ಎರಡನೇ ಸುತ್ತಿನ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕು ಮಟ್ಟದ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ಎನ್‍ಎಸ್ ಎಸ್ ಮತ್ತು ಎನ್‍ಸಿಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅಧಿಕಾರಿಗಳಿಗೆ ಸಾಥ್ ನೀಡುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಈ ಹಿಂದಿನ ಭಾನುವಾರ ಕೋಟೆಯ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು 12 ತಂಡಗಳನ್ನು ರಚಿಸಿ ಅವರಿಗೆ ಜವಬ್ದಾರಿ ವಹಿಸಲಾಗಿತ್ತು. ಹೀಗಾಗಿ ಜವಬ್ದಾರಿ ವಹಿಸಿದ ಒಂದೋಂದು ತಂಡಗಳು ಒಂದೋಂದು ಇಲಾಖೆಗೆ ವಹಿಸಿ ತಂಡಗಳನ್ನು ರಚಿಸಿ ಕೋಟೆಯ ಆವರಣವನ್ನು ಸ್ವಚ್ಛಗೊಳಿಸಿದರು. ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೆÇೀಲೀಸ್ ವರಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ ಬಾಬು ಅವರು ಸ್ವಚ್ಚತೆ ಮಾಡಿದ ಸ್ಥಳಕ್ಕೆ ಹೋಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ವಚ್ಛತೆಗೊಳಿಸಿದ ಹಿನ್ನಲೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವುದರ ಜೊತೆಗೆ ಅವರನ್ನು ಹುರಿದುಂಬಿಸಿ ಸಿಬ್ಬಂದಿಯೊಂದಿಗೆ ಗ್ರೂಪ್ ಫೆÇೀಟೆ ತೆಗೆದುಕೊಳ್ಳುವ ಮೂಲಕ ಎಲ್ಲರಲ್ಲಿ ಉತ್ಸಾಹ ತುಂಬಿದರು.

ನಂತರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ನಗರದ ಐತಿಹಾಸಿಕ ಕೋಟೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರ ದೊಡ್ಡದಾಗಿದೆ. ಅವರಿಗೆ ವಹಿಸಲಾದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

ಕೆಳಗೆ ಬೆಳೆದ ಮರಗಳನ್ನು ನಾವು ಕಡಿಯಬಹುದು ಆದರೆ, ಕೋಟೆಯ ಸುತ್ತ ಮುತ್ತ ದೊಡ್ಡ ಗೋಡೆಯ ಮೇಲೆ ಬೆಳೆದ ಗಿಡ ಗಿಡಗಂಟಿಗಳನ್ನು ತೆಗೆಯಲು ಆಗುವುದಿಲ್ಲ. ಹೀಗಾಗಿ ನುರಿತ ಕೆಲಸ ಗಾರರನ್ನು ಗೋಡೆಯ ಮೇಲಿನ ಗಿಡಗಂಟಿಗಳು ತೆಗೆಯಲು ಹಚ್ಚಬೇಕಯ ಅದಕ್ಕೆ ಬೇಕಾದ ಅನುದಾನವನ್ನು ನಾವು ನೀಡುತ್ತೆವೆ ಎಂದು ತಿಳಿಸಿದರು. ಬರುವ ಆಗಷ್ಟ್ 15 ರಂದು ಕೋಟೆ ಎಲ್ಲರಿಗೂ ಆಕರ್ಷಿಸುವಂತೆ ವಿಶೇಷ ಅಲಂಕಾರ ಮಾಡುವ ಯೋಜನೆ ಹಾಕಿ ಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದಭದಲ್ಲಿ ನಗರ ಸಭೆ ಅಧ್ಯಕ್ಷೆ ಶಹಜಹಾನ ಶೇಕ್ ತನ್ವೀರ ಅಹ್ಮದ್, ಬಸವಕಲ್ಯಾಣ ಸಹಾಯಕ ಆಯ್ತುರಾದ ರಮೇಶ ಕೋಲಾರ, ತಹಶೀಲ್ದಾರ ಸಾವಿತ್ರಿ ಶರಣು ಸಲಗರ, ತಾ.ಪಂ.ಇಒ ಕಿರಣ್ ಪಾಟೀಲ್, ಸಹಾಯಕ ನಿರ್ದೇಕ (ಪಂ.ರಾ) ಅರುಣಕುಮಾರ ಪಾಟೀಲ್, ನಗರ ಸಭೆ ಪೌರಾಯುಕ್ತ ಶಿವಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.